ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರ ಹಿತಾರಕ್ಷಣ ವೇದಿಕೆ ವತಿಯಿಂದ ಜನಜಾಗೃತಿಗಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೇವು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರರಾಜ್ಯದಿಂದ ಕಟ್ಟಡ ಕಾರ್ಮಿಕ ಕೆಲಸಕ್ಕೆ ಬರುಔರು ಕ್ರಿಮಿನಲ್ ಹಿನ್ನಲೆಯನ್ನ ಹೊಂದಿರುತ್ತಾರೆ. ಯಾವುದೇ ಮಾಹಿತಿ ನೀಡದೇ ಇರುವುದು ಕೂಡ ಹೆಚ್ಚಾಗಿದೆ.
ಸ್ಥಳೀಯ ಮಹಿಳೆಯರನ್ನ ಆಕರ್ಷಿಸಿ ಕರೆದುಕೊಂಡು ಹೋಗುವುದು. ಬೆಲೆ ಬಾಳುವ ಯಂತ್ರೋಪಕರಣವನ್ನ ಕಳುವು ಮಾಡುವುದು. ಆಧಾರ್ ಕಾರ್ಡ, ರೇಷನ್ ಕಾರ್ಡ್ ಗಳನ್ನ ಪಡೆದು ಕೆಲಸ ನೀಡಬೇಕು. ಇಂಜಿನಿಯರ್, ಮೇಸ್ತ್ರಿಗಳು ವಹಿಸಬೇಕು ಎಂದು ಆಗ್ರಹಿಸಿ ಬೈಕ್ ರ್ಯಾಲಿ ನಡೆಸಲಾಗುತ್ತಿದೆ.
ಆ.19 ರಂದು ಬೆಳಿಗ್ಗ 10-30 ಕ್ಕೆ ಬಸ್ ನಿಲ್ದಾಣದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಎಮ್ಆರ್ ಎಸ್, ಬೈಪಾಸ್ ರಸ್ತೆ, ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ವಿನೋಬ ನಗರ, ಉಷಾ ನರ್ಸಿಂಗ್ ಹೋಂ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ