ಸುದ್ದಿಲೈವ್/ಶಿವಮೊಗ್ಗ
ಕೊಲ್ಕತ್ತಾ ಮೆಡಿಕಲ್ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣವನ್ನ ಖಂಡಿಸಿ ಇಂದು ಖಾಸಗಿ ಮತ್ತು ಸರ್ಕಾರಿ ವೈದ್ಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆಯಿಂದ ಗೋಪಿವೃತ್ತದ ವರೆಗೆ ಪ್ರತಿಭಟನೆನಡೆಸಲಾಯಿತು.
ಅತ್ಯಾಚಾರ ಕೊಲೆ ಖಂಡಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ಆಸ್ಪತ್ರೆಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ನಗರದಲ್ಲಿರಯವ ಖಾಸಗಿ ಮತ್ತು ಮೆಗ್ಗಾನ್ ಆಸ್ಪತ್ರೆಯ ತುರ್ತು ಘಟಕ ಚಿಕಿತ್ಸಾ ವಿಭಾಗವನ್ನ ಹೊರತು ಪಡಿಸಿ ಎಲ್ಲಾ ಸೇವೆಯನ್ನ ಬಂದ್ ಮಾಡಲಾಗಿತ್ತು.
ಶಿವಮೊಗ್ಗದಲ್ಲಿ ಒಪಿಡಿ ಬಂದ್ ಮಾಡಿದ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಗೋಪಿ ವೃತದಲ್ಲಿ ಮಾನವ ಸರಪಳಿ ರಚಿಸಲಾಯಿತು.
ಈ ವೇಳೆ ಎಂ ಎಲ್ ಸಿ ಹಾಗೂ ವೈದ್ಯರು ಆದ ಡಾ.ಧನಂಜಯ್ ಸರ್ಜಿ, ಸಿಮ್ಸ್ ನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ