ಮಂಗಳವಾರ, ಆಗಸ್ಟ್ 13, 2024

ಜಿಲ್ಲಾ ಒಕ್ಕಲಿಗರ ಸಂಘಕ್ಕೆ 20 ಜನ ನಿರ್ದೇಶಕರ ಆಯ್ಕೆ



ಸುದ್ದಿಲೈವ್/ಶಿವಮೊಗ್ಗ


ಒಕ್ಕಲಿಗ ಸಂಘದ ಜಿಲ್ಲಾ ಸಂಘದ 21 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು 20 ನಿರ್ದೇಶಕರನ್ನ ಆಯ್ಕೆ ಮಾಡಲಾಗಿದೆ. 


21 ಜನರ ಆಯ್ಕೆಯಲ್ಲಿ ರಮೇಶ್ ಹೆಗ್ಡೆ 2001 ಮತಗಳನ್ನ ಪಡೆದು ಮೊದಲ ಆಯ್ಕೆಯಾಗಿದ್ದಾರೆ.  ಮೂರು ಜನ ಮಹಿಳೆ  ಮೀಸಲಿದ್ದ ಸ್ಥಾನಕ್ಕೆ 6 ಜನ ಸ್ಪರ್ಧಿಸಿದ್ದರು. ನಿನ್ನೆ 12-30 ರಾತ್ರಿಯ ವರೆಗೂ ಮತ ಎಣಿಕೆಯಾಗಿದ್ದು ಮಹಿಳೆಯರ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದು ವರೆದಿದೆ. 


ಈ ಕುರಿತು ಸಂಘದ ಕಾರ್ಯಕಾರಿಣಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ರಮೇಶ್ ಹೆಗಡೆ, ಡಾ.ಕಡಿದಾಳ್ ಗೋಪಾಲ, ರವಿ ಕುಮಾರ್ ಸೇರಿ 20 ಜನ ಆಯ್ಕೆಯಾಗಿದ್ದಾರೆ. ಮಹಿಳೆಯರ ಆಯ್ಕೆ ಏನಾಗಲಿದೆ ಕಾದು ನೋಡಬೇಕಿದೆ. 

ಒಕ್ಕಲಿಗ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಚೇತನ್ ಗೌಡರಿಗೆ ಗೆಲುವಿನ ಹೂಮಾಲೆ

29 ಜನ ಸ್ಪರ್ಧಿಸಿದ್ದರು. 21 ಜನರ ಸಿಂಡಿಕೇಟ್ ನಿರ್ಮಿಸಿದ್ದರು.  4137 ಮತಗಳಲ್ಲಿ  2599 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 2024ರ ಸದಸ್ಯರ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತ್ತು ಮತಗಳು ಹೀಗಿವೆ


1) ಬಿ ಎ ರಮೇಶ್ ಹೆಗ್ಡೆ= 2001, 2) ರವಿಕುಮಾರ್ =1856, 3) ಡಾ. ಕಡಿದಾಳ್ ಗೋಪಾಲ್=1805 ,4) ಆಶಿತ್ ಬಳಗಟ್ಟೆ =1630, 5) ಬಂಡೆ ವೆಂಕಟೇಶ್ =1527, 6) ಸುದರ್ಶನ್ ತಾಯಿಮನೆ = 1461, 7) ಎಂ ಎ ರಮೇಶ ಹೆಗ್ಡೆ = 1442, 8) ಉಂಬಳೇಬೈಲು ಮೋಹನ್ = 1436, 9) ಪುಟ್ಟಸ್ವಾಮಿ =1417, 10) ಆದಿಮೂರ್ತಿ =1410, 11) ಪ್ರತಿಮಾ ಡಾಕಪ್ಪ=1367, 12) ರಮೇಶ್ ಬಿ ನಾಯಕ್=1366, 13) ನೀರುಳ್ಳಿ ನಾಗರಾಜ್ =1342,14) ಸುಂದರೇಶ್ =1301

ಮಾಜಿ ನಿರ್ದೇಶಕಿ ವನಮಾಲ ಮೋಹನ್


15) ಸುಮಿತ್ರ ಕೇಶವಮೂರ್ತಿ=1298, 16) ಭಾರತಿ ರಾಮಕೃಷ್ಣ =1262, 17) ಚೇತನ್ =1260, 18) ಅನ್ನಪೂರ್ಣ =1259, 19) ಸಹನಾ =1055, 20) ವನಮಾಲ =1031 ಮತಗಳನ್ನ ಪಡೆದಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ