ತುಂಗ ಜಲಾಶಯ |
ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯಲ್ಲಿ ಮಳೆ ಆಗಾಗ ಕಾಣಿಸಿಕೊಂಡಿದ್ದು ಜುಲೈನಲ್ಲಿ ಬೀಳುತ್ತಿದ್ದ ಮಳೆಯ ಆರ್ಭಟ ಸಧ್ಯಕ್ಕೆ ನಿಂತಿದೆ. ಪರಿಣಾಮ ಜಿಲ್ಲೆಗಳ ಜಲಾಶಯದ ಒಳಹರಿವು ತಗ್ಗಿದೆ.
ಲಿಂಗನಮಕ್ಕಿ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಇವತ್ತು 7741 ಕ್ಯೂಸೆಕ್ ಒಳ ಹರಿವು ಇದೆ. 7619 ಕ್ಯೂಸೆಕ್ ನೀರಿನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1816.65 ಅಡಿ ಇದೆ. ಜಲಾಶಯದಲ್ಲಿ 143.74 ಟಿಎಂ ನೀರು ಸಂಗ್ರಹವಾಗಿದೆ
ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಕೂಡ ಇಳಿಕೆಯಾಗಿದೆ. ಇವತ್ತು 9137 ಕ್ಯೂಸೆಕ್ ಒಳ ಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಇದೆ.
ಭದ್ರಾ ಜಲಾಶಯದ ಒಳ ಹರಿವು ಕುಸಿತ ಕಂಡಿದೆ. ಇವತ್ತು 6075 ಕ್ಯೂಸೆಕ್ ಒಳ ಹರಿವು ಇದೆ. 7811 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತತ ಜಲಾಶಯದ ನೀರಿನ ಮಟ್ಟ 180.1 ಅಡಿ ಇದೆ. 64.32 ಟಿಎಂಸಿ ನೀರು ಸಂಗ್ರಹವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ