ಸುದ್ದಿಲೈವ್/ಶಿವಮೊಗ್ಗ
ಟೇಕ್ವಾಂಡೋ(ಸಮರಕಲೆ) ಗರ್ಲ್ ಚಿತ್ರ ಆಗಸ್ಟ್ 30 ಕ್ಕೆ ಬಿಡುಗಡೆಯಾಗುತ್ತಿದೆ. ಶಿವಮೊಗ್ಗದ ಡಾ.ಸುಮಿತ ಪ್ರವೀಣ್ ಭಾನು ಆತ್ರೇಯ ಕ್ರಿಯೇಶನ್ಸ್ ಅವರ ಚೊಚ್ಚಲ ನಿರ್ಮಾಣದ ಈ ಚಿತ್ರ ಸೌತ್ ಕೋರಿಯಾದ ಸಮರಕಲೆ ಚಿತ್ರವಾಗಿದೆ.
ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹೆಣ್ಣಮಕ್ಕಳ ರಕ್ಷಣೆಯನ್ನ ತಾವು ಹೇಗೆ ಮಾಡಿಕೊಳ್ಳಬೇಕು ಎಂದು ಈ ಚಿತ್ರದ ಸಂದೇಶವಿದೆ. ಇಂದು ಚಿತ್ರ ತಂಡ ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರ ತಂಡ ರಾಜ್ಯಾದ್ಯಂತ ಶಾಲಾ ಮಕ್ಕಳು ಚಿತ್ರ ನೋಡುವಂತೆ ಕೋರಿದೆ. 200 ಮಕ್ಕಳಿಗೆ ಈ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ.
ಚಿತ್ರ ಬಿಡುಗಡೆಯ ವಿಳಂಬವಾಗಿದೆ. ಜೂನ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಆ.30 ಕ್ಕೆ ಸಿದ್ದವಾಗಿದೆ. ನಿರ್ಮಾಪಕರಾದ ಡಾ.ಸುಮಿತ ಪ್ರವೀಣ್ ಭಾನು ಅವರ ಪುತ್ರಿ ಸರ್ಷ ಋತು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಟ್ವೆಕ್ವಾಂಡೋ ಎಂಬುದು ಹೊಡೆದಾಡುವುದಲ್ಲ ಬದಲಿಗೆ ಸಾಧನೆ ಮಾಡುವುದು ಎಂಬುದು ಚಿತ್ರದಸಂದೇಶವಾಗಿದೆ.
ಎರಡು ಹಾಡುಗಳಿವೆ. ಈ ಕುರಿತು ಮಾತನಾಡಿದ 6 ನೇ ತರಗತಿಯಲ್ಲಿ ಓದುತ್ತಿರುವ ಸ್ಪರ್ಷ ಭಾನು ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಈಗಾಗಲೇ ಬಾಲನಟಿಯಾಗಿ ಕಾಂಗ್ರೋ, ಗಂಗೆಗೌರಿ, ತಾರಕೇಶ್ವರ ಸೇರಿದಂತೆ 6 ಚಿತ್ರಗಳಲ್ಲಿ ಅಭಿನಯಿಸಿರುವುದಾಗಿ ತಿಳಿಸಿದ್ದಾರೆ.
ಬ್ಲಾಕ್ ಬೆಲ್ಟ್ ಪಡೆದಿರುವ ಈ ಬಾಲನಟಿ ಡಾನ್-1 ಪರೀಕ್ಷೆ ಎದುರಿಸಬೇಕಿದೆ. ಬೆಂಗಳೂರಿನಲ್ಲಿ ರಾಜಾಜಿನಗರದಲ್ಲಿ ಶೂಟಿಂಗ್ ನಡೆದಿದೆ. 50 ಲಕ್ಷ ಬಜೆಟ್ ನ ಚಿತ್ರವಾಗಿದೆ. ರಾಜ್ಯಾದ್ಯಂತ ಪ್ರತಿ ಜಿಲ್ಲೆಯ ಒಂದು ಚಿತ್ರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿಙತಿಸಲಾಗಿದೆ ಎಂದು ಚಿತ್ರದ ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಭಾನು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ