ಶನಿವಾರ, ಆಗಸ್ಟ್ 3, 2024

ಶಿಮೂಲ್ ಚುನಾವಣೆ- ಇದುವರೆಗೆ 38 ಜನ ನಾಮಪತ್ರ ಸಲ್ಲಿಕೆ

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಾಮಾನ್ಯ ಸದಸ್ಯರ ಚುನಾವಣೆಗೆ  ನಿನ್ನೆಯ ವರೆಗೆ 35 ಜನ ನಾಮಪತ್ರ ಸಲ್ಲಿಸಿದ್ದು ಇಂದು ಸಹ ನಾಮಪತ್ರಸಲ್ಲಿಕೆ ಮುಂದುವರೆದಿದೆ.


ಆಗಸ್ಟ್‌ 6ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.  ಆ.8ರಂದು ನಾಮಪತ್ರ ವಾಪಸ್‌ ಪಡೆಯಬಹುದಾಗಿದೆ.  ಆ.14ರಂದು ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಚುನಾವಣ ಅಧಿಕಾರಿಯಾಗಿ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ಅವರನ್ನು ನೇಮಿಸಲಾಗಿದೆ.


ನಿನ್ನೆ ಶಿವಮೊಗ್ಗದ ಯಡವಾಲ ಹಾಲು ಉತ್ಪಾದಕ ಸಹಕಾರ ಸಂಘದಿಂದ ಕೆ.ಎಲ್ ಜಗದೀಶ್ವರ್, ಭದ್ರಾವತಿಯಲ್ಲಿ ಕೆಂಚೇನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಎಸ್ ಕುಮಾರ್, ಕಾಚಗೊಂಡನಹಳ್ಳಿಯಲ್ಲಿ ಆನಂದ ಡಿ,


ಸಾಗರ ವಿಭಾಗದಿಂದ ಹೊಸನಗರ ತಾಲೂಕಿನ  ಕಾರ್ಗಡಿ ಹಾಲು ಉತ್ಪಾದಕರ ಸಂಘದಿಂದ ವಿದ್ಯಾಧರ, ಶಿಕಾರಿಪುರದ‌ ಹಿರೇಜಂಬೂರು ಹಾಲು ಉತ್ಪಾದಕರ ಸಂಘದಿಂದ ಟಿ.ಶಿವಶಂಕರಪ್ಪ, ಸೊರಬದ ತ್ಯಾವಗೋಡು ಹಾಲು ಉತ್ಪಾದಕರ ಸಂಘದಿಂದ ಟ.ಎಸ್.ದಯಾನಂದ ಗೌಡ,


ಶಿಕಾರಿಪುರ ತಾಲೂಕಿನ ಅರೇರಕೆರೆ ಹಾಲು ಉತ್ಪಾ್ಕರ ಮಹಿಳಾ ಸಹಕಾರ ಸಂಘದಿಂದ ಶ್ವೇತಾ ಕೋಂ ಎಸ್ಪಿ ಚಂದ್ರಶೇಖರ್ ಗೌಡ, ದಾವಣಗೆರೆ ವಿಭಾಗದ ಹರಿಹರ ತಾಲೂಕಿನ ಹನಗವಾಡಿ ಹಾಲು ಉತ್ಪಾದಕರ ಸಂಘದಿಂದ ಜಗದೀಶಪ್ಪ ಬಣಕರ್, ಗೋಪನಾಳು ಹಾಲು ಉತ್ಪಾದಕರ ಸಂಘದಿಂದ ಹೆಚ್. ಕೆ. ಪಾಲಾಕ್ಷಪ್ಪ, ಹೊನ್ನಾಳಿಯ ಕುಂದೂರು ಹಾಲು ಉತ್ಪಾದಕರ ಸಂಘದಿಂದ ಅನಿಲ್ ಕುಮಾರ್ ವೈ.ಎಂ


ಚನ್ನಗಿರಿಯ ಕಂಚುಗಾರನಹಳ್ಳಿ ಹಾಲು ಉತ್ಪಾದಕರಸಂಘದಿಂದ ಹೆಚ್ ಕೆ ಬಸಪ್ಪ, ಚಿತ್ರದುರ್ಗದ ಓಬವ್ವನಾಗತಿ ಹಾಲು ಉತ್ಪಾದಕರ ಸಂಘದಿಂದ ಬಿ.ಪಿ.ರೇವಣಸಿದ್ದಪ್ಪ, ಹೊಳಲ್ಕೆರೆಯ ಟಿ.ನುಲೇನೂರು ಹಾಲು ಉತ್ಪಾದಕರ ಸಂಘದಿಂದ ಜಿ.ಬಿ.ಶೇಖರಪ್ಪ,


ಹೊಸದುರ್ಗದ ತಾರೀಕೆರೆ ಹಾಲು ಉತ್ಪಾದಕರ ಸಂಘದಿಂದ ಎಸ್.ಶಂಕರಲಿಂಗಪ್ಪ, ಚಳ್ಳಕೆರೆಯ ನರಹರಿನಗರ ಹಾಲು ಉತ್ಪಾದಕರ ಸಂಘದಿಂದ ಬಿ.ಸಿ.ಸಂಜೀವ ಮೂರ್ತಿ, ಸಿಂಗಾಪುರ ಹಾಲು  ಉತ್ಪಾದಕರ ಸಹಕಾರ ಸಂಘದಿಂದ ಟಿ.ಎಸ್ ಶಶಿಧರ,


ಯಾದಲಗಟ್ಟೆ  ಹಾಲು ಉತ್ಪಾದಕರ ಸಂಘದಿಂದ ಸಿ.ವೀರಭದ್ರಬಾಬು, ಹೊಸದುರ್ಗದ ಈರಣ್ಣನಪಾಳ್ಯ ಹಾಲು ಉತ್ಪಾದಕರ ಸಂಘದಿಂದ ವಿ.ಕಾಂತರಾಜು, ಹಿರಿಯೂರಿನ ಚಿಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಶಿವಣ್ಣ ಪಿ.ಎಲ್ ಹೊಳಲ್ಕೆರೆಯ ಬೆದರೆಕೆರೆ ಹಾಲು ಉತ್ಪಾದಕರ ಸಂಘ ಎ.ಎಂ.ಶಿವಾನಂದ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ.


ಇಂದು ಮೂವರು ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ವಿಭಾಗದ ಚನ್ನಗಿರಿ ದೊಡ್ಡಮಲ್ಲಾಪುರ ಹಾಲು ಉತ್ಪಾದಕರ ಸಂಘದ ಎನ್ ಎಂ‌ಪ್ರಕಾಶ್, ಚಿತ್ರದುರ್ಗವಿಭಾಗದ ಹೊಸದುರ್ಗದ ಕಬ್ಬಳ ಹಾಲು ಉತ್ಪಾದಕರ ಸಂಘದ ಬಿ.ಆರ್.ರವಿಕುಮಾರ್,


ನಾಗರಕಟ್ಟೆ ಹಾಲು ಉತ್ಪಾದಕರ ಸಂಘದ ನಾಗರ ಕಟ್ಟೆ ಹಾಲು ಉತ್ಪದಕರ ಸಂಘ ಆರ್. ತಿಮ್ಮಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ 14 ಜನರ  ನಿರ್ದೇಶಕರ ಸ್ಥಾನಕ್ಕೆ  38 ಜನ ನಾಮಪತ್ರ ಸಲ್ಲಿಸಿದಂತಾಗಿದೆ.


ಇದನ್ನೂ ಓದಿ-https://www.suddilive.in/2024/08/blog-post_13.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ