ಬುಧವಾರ, ಆಗಸ್ಟ್ 7, 2024

ತಮಟೆ ಬಾರಿಸಲು ಅಡ್ಡಿ ಪ್ರಕರಣ-ನಾಲ್ವರು ನ್ಯಾಯಾಂಗ ಬಂಧನಕ್ಕೆ

 


ಸುದ್ದಿಲೈವ್/ಶಿವಮೊಗ್ಗ


ಟಿಪ್ಪುನಗರದ ಮೊದಲನೇ ತಿರುವಿನಲ್ಲಿ ಆ.4 ರಂದು  ರಾತ್ರಿ ಶವ ಸಂಸ್ಕಾರದ ವೇಳೆ ತಮಟೆ ಹೊಡೆಯದಂತೆ ಆಕ್ಷೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬೆನ್ನಲ್ಲೇ ಐವರನ್ನ ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 


ಅಪರಿಚಿತ 5 ಜನ ಮುಸ್ಲೀಂ ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಟಿಪ್ಪುನಗರದ ಮುರುಗನ್ ಎಂಬುವರ ಸಹೋದರಿ ಸರಸ್ವತಿ ಎಂಬುವರು ಅಸುನೀಗಿದ್ದು, ಶವಸಂಸ್ಕಾರಕ್ಕಾಗಿ ಟಿಪ್ಪುನಗರ ಚಾನೆಲ್ ನಲ್ಲಿ ಗಂಗೆಪೂಜೆ ಮಾಡಿ ನೀರು ತರುವಾಗ ಮಲ್ನಾಡ್ ಕಾಂಪ್ಲೆಕ್ಸ್ ಬಳಿ 5-6 ಜನ ಮುಸ್ಲೀಂ ಯುವಕರು ಅಡ್ಡಿಪಡಿಸಿರುವುದಾಗಿ ದೂರಲಾಗಿತ್ತು. 


ಇಲ್ಲಿ ತಮಟೆ ಬಾರಿಸದಂತೆ ಬೈದು ಕೂಗಾಡಿದ್ದು,  ತಮಟೆ ಬಾರಿಸುವುದನ್ನ ನಿಲ್ಲಿಸಿ ಮುಂದೆ ಸಾಗುವಾಗ ಮುರುಗನ್  ಕಡೆಯ ಮಹಿಳೆಯರ ಮೇಲೆ ಕೈ ಮತ್ತು ಕಲ್ಲುಗಳಿಂದ ಹೊಡೆದು ಅವ್ಯಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಲಾಗಿತ್ತು. 


ಕೆಲವರು ಬಿಡಿಸಲು ಮುಂದಾದರೂ ಸಹ 10-15 ಜನರ ಗುಂಪು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಬಂದಿದ್ದನ್ನ ಕಂಡು ಜಾಗ ಖಾಲಿ ಮಾಡಿರುವುದಾಗಿ ಎಫ್ಐಆರ್ ನಲ್ಲಿ ತಿಳಿಸಲಾಗಿದೆ. 5-6 ಜನ ಮುಸ್ಲೀಂ ಯುವಕರ ಮೇಲೆ ಪ್ರಕರಣ ದಾಖಲಾಗಿತ್ತು. 


ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಸರ್ಫರಾಜ್, ಸಲ್ಮಾನ್, ಸಾಹೀಲ್, ರೋಷನ್ ಸೇರಿದಂತೆ ಮೂವರನ್ನ ತುಂಗ ನಗರ ಪೊಲೀಸರು ಬ ಬಂಧಿಸಿದ್ದಾರೆ. ನಾಲ್ವರಿಗೆ ಜೆಸಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ