ರೆಹಮತ್ ಯಾನೆ ಡಾಲರ್ |
ಸುದ್ದಿಲೈವ್/ಶಿವಮೊಗ್ಗ
ಕೌಟುಂಬಿಕ ಕಲಹ ಸರಿ ಮಾಡಲು ಬಂದವರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮನನೊಂದ ಪತಿಗೆ ಟಾರ್ಚರ್ ನೀಡಿ ವಿಷಸೇವಿಸುವಂತೆ ಮಾಡಿರುವ ಆರೋಪದ ಮೇರೆಗೆ ಪತ್ನಿಯೂ ಸೇರಿ ನಾಲ್ವರ ಮೇಲೆ ದೂರು ದಾಖಲಾಗಿದೆ. ಇದರಲ್ಲಿ ಕಾಂಗ್ರೆಸ್ ನ ಮೈನಾರಿಟಿ ಘಟಕದ ಕಾರ್ಯದರ್ಶಿ ರೆಹಮತ್ ಯಾನೆ ಡಾಲರ್, ಮುಷ್ತಾಕ್, ಮುನ್ನಾ ಹಾಗೂ ಪತ್ನಿಯ ಹೆಸರು ಕೇಳಿ ಬರುತ್ತಿದೆ.
ನ್ಯೂ ಮಂಡ್ಲಿಯ ದಸ್ತಿಗಿರ್ ಎಂಬುವರ ಸಹೋದರ ಇಲ್ಯಾಜ್ ಅಹಮದ್ ಮೂರು ವರ್ಷಗಳ ಹಿಂದೆ ಶೇಷಾದ್ರಿಪುರಂನ ನಿವಾಸಿಯೊಂದಿಗೆ ಮದುವೆಯಾಗಿತ್ತು. ಪತ್ನಿಯ ನಡೆತೆ ನಾಲ್ಕೈದು ತಿಂಗಳಿಂದ ಸರಿಯಿರಲಿಲ್ಲ ಎಂದು ದೂರುವ ಪತಿ ಇಲ್ಯಾಜ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ಸಂಧಾನದ ವೇಳೆ ಇಲ್ಯಾಜ್ ಜೊತೆ ಬಂದ ರೆಹಮತ್ ಯಾನೆ ಡಾಲರ್, ಮುಸ್ತಾಫಾ ಹಾಗೂ ಮುನ್ನ ಆತನ ಪತ್ನಿಯನ್ನ ಕಂಡು ಪತ್ನಿಯ ಪರ ಮಾತನಾಡಿದ್ದಾರೆ. ನಂತರದ ದಿನಗಳಲ್ಲಿ ರೆಹಮತ್ ಮತ್ತು ಇಬ್ಬರು ಮೂವರು ಆಕೆಗೆ ಹತ್ಗಿರವಾಗಿ ಜೊತೆ ತಿರುಗಾಡಲು ಆರಂಭಿಸಿದ್ದಾರೆ.
ಇದರಿಂದ ಇಲ್ಯಾಜ್ ಗೆ ಬೈಯುವುದು, ಬೆದರಿಸುವುದು ಮಾಡಲಾರಂಭಿಸಿದ್ದಾರೆ. ನಂತರ ಇಲ್ಯಾಜ್ ಗೆ ಸಂಸಾರ ಮಾಡಿಕೊಂಡು ಹೋಗು ಎಂದು ಬೆದರಿಸಿದ್ದಾರೆ. ಜುಲೈ 7 ರಂದು ಕೆಎಸ್ಆರ್ ಟಿಸಿ ಡಿಪೋ ಬಳಿ ಕರೆಯಿಸಿ ಸಂಸಾರ ನಡೆಸಿಕೊಂಡು ಹೋಗುವಂತೆ ತಾಕೀತು ಮಾಡಿದ್ದಾರೆ.
ತಪ್ಪಿಸಿಕೊಳ್ಳು ಅವಕಾಶಕೊಡದ ಈ ಮೂವರು ಇಲ್ಯಾಸ್ ಗೆ ಬೆದರಿಕೆ ಹಾಕಿದ್ದಾರೆ. ಅವ್ಯಾಚ್ಯಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಇಲ್ಯಾಸ್ ನ ಪತ್ನಿ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ಇಲ್ಯಾಸ್ ಮನನೊಂದಿದ್ದರು. ಇಷ್ಟಕ್ಕೆ ನಿಕ್ಲಸದ ಡಾಲರ್ ಗ್ಯಾಂಗ್ ಬೆದರಿಕೆ ಮತ್ತು ಅವ್ಯಾಚ್ಯ ಶಬ್ದಗಳಿಂದ ಬೈಯುವುದನ್ನ ಮುಂದು ವರೆಯಿಸಿದ್ದ ಕಾರಣ ಆ.04 ರಂದು ಇಲ್ಯಾಸ್ ವಿಷ ಸೇವಿಸಿದ್ದಾರೆ.
ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿತ್ತು. ಆ.06 ರಂದು ಅವರಿಗೆ ಚಿಕಿತ್ಸೆ ಕೊಡಿಸಲು ಮಂಗಳೂರಿನಲ್ಲಿ ಚಿಕಿತ್ಸೆ ನಿರಾಕರಿಸಿರುವುದಾಗಿ ತಿಳಿದು ಬಂದಿದೆ. ಮತ್ತೆ ಇವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿರುವುದಾಗಿ ಅವರ ಆಪ್ತ ವಲಯ ತಿಳಿಸಿದೆ.
ಈ ಮಧ್ಯೆ ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷ ರೆಹಮತ್ ರನ್ನ ಠಾಣೆಗೆ ಕರೆತರಲಾಗಿದ್ದು ಕೆಲವರು ಕಾನೂನು ಸುವ್ಯವಸ್ಥೆಯಲ್ಲಿ ಮೂಗು ತೂರಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಗಂಭೀರವಾಗಿದ್ದು ಪೊಲೀಸರು ಏನು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ