ಸೋಮವಾರ, ಆಗಸ್ಟ್ 5, 2024

ಭದ್ರ ಯೋಜನೆಯ ಸೂಪರಿಂಟೆಂಡೆಂಟ್ ವಿರುದ್ಧ ಕಂದಾಯ ಸಚಿವರು ಗರಂ

 

ಭದ್ರ ಜಲಾಶಯಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ

ಸುದ್ದಿಲೈವ್/ಭದ್ರಾವತಿ


ಭದ್ರ ಯೋಜನೆಯ ಸೂಪರಿಂಟೆಂಡೆಂಟ್ ವಿರುದ್ಧ ಕಂದಾಯ ಸಚಿವ ಕೃಷ್ಣೇ ಭೈರೇಗೌಡ ಗರಂ ಆಗಿ ನೀವೆ ಕೃತಕ ಪ್ರವಾಹ ಉಂಟು ಮಾಡಿದ್ದೀರಿ ಎಂದು ಆರೋಪಿಸಿದರು.


ಇಂದು ಬಿಆರ್ ಪಿಯ ಭದ್ರಜಲಾಶಯಕ್ಕೆ ಭೇಟಿ ನೀಡಿದ ವೇಳೆ ಯಾರು ಜಲಾಶಯದಿಂದ ನದಿಗೆ ನೀರು ಹರಿಸಲು ಆದೇಶಿಸಬೇಕು. ಸಿಡಬ್ಲೂಸಿ ಯಿಂದ ಆದೇಶ ಬರಬೇಕು. ನಾವು ನಿಮಗೆ ನೀರು ಹರಿಸಲು ಸೂಚಿಸಿದರೂ ಯಾಕೆ ನೀರು ಬಿಡಲಿಲ್ಲ ಎಂಬುದು ಸಚಿವರ ಮಾತಾಗಿದೆ. 


ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ಬಿಡುವುದರಿಂದ ತಗ ನದಿಯಲ್ಲಿ 70-80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1.5 ಲಕ್ಷ ಕ್ಯೂಸೆಕ್ ನೀರಿನಿಂದ ನದಿಪಾತ್ರದ ಜನರಿಗೆ ಪ್ರವಾಹ ಉಂಟು ಮಾಡುದ್ದೀರಿ ಎಂದು ಅಧಿಕಾರಿ ಸುಜಾತ ವಿರುದ್ಧ ಗರಂ ಆದರು. 


ನಿಮ್ಮದೇ ಇಲಾಖೆ ಆಲಮಟ್ಟಿಯಲ್ಲಿ ಜಲಾಶಯದಲ್ಲಿ   ಶೇ.55 ರಷ್ಟು ನೀರು ಉಳಿಸಿಕೊಂಡು ಪರಿಸ್ಥಿತಿ ತುಂಬ ಚೆನ್ನಾಗಿ ನಿಭಾಯಿಸಿದ್ದರು. ನಿಮ್ಮದೇ ಇಲಾಖೆ ಯಾಕೆ ಜಲಾಶಯದಲ್ಲಿ ಮಳೆ ಆಧಾರಿತವಾಗಿ ಪರಿಗಣಿಸಿ ಜಲಾಶಯದಿಂದ ನೀರು ಹರಿಸಲಿಲ್ಲ ಎಂದು ಸಚಿವರ ಪ್ರಶ್ನೆಗೆ ಅಧಿಕಾರಿಗಳು ಮಾತನಾಡದ ಸ್ಥಿತಿ ನಿರ್ಮಾಣವಾಗಿತ್ತು. 


ಜಲಾಶಯದಲ್ಲಿ ಶೇ.95 ನಷ್ಟು ನೀರು ಉಳಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. ನಂತರ ಪ್ರವಾಹ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆಯವರು ಖಡಕ್ ಎಚ್ಚರಿಕೆ ನೀಡಬೇಕು. ಕೇಳದಿದ್ದರೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸಲು ಸೂಚಿಸಿದರು‌. ಸಣ್ಣಪುಟ್ಟ ವಿಚಾರದಲ್ಲಿ ಖಡಕ್ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.‌

ಪ್ರವಾಹದ ವೇಳೆ ಸೂಕ್ತದಾಖಲಾತಿ ನೀಡಿದರೆ ಪರಿಹಾರ ನೀಡಲಾಗುವುದು  ಅಂದಾಜು ಮೊತ್ತ ಕಳುಹಿಸಿದರೆ ಪರಿಹಾರ ಸಿಗೊಲ್ಲವೆಂದರು.  ಈ ವೇಳೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಇದನ್ನೂ ಓದಿ-https://www.suddilive.in/2024/08/blog-post_41.html


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ