ಸುದ್ದಿಲೈವ್/ಶಿವಮೊಗ್ಗ
ಆ.02 ರಂದು ಅಜ್ಜಿಯ ಕೊಲೆ ಆರೋಪಿತಸ್ಥತರನ್ನ ಕುಂಸಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನ ಆದರ್ಶ ಎಂದು ಗುರುತಿಸಲಾಗಿದೆ.
ಆರೋಪಿ ಆದರ್ಶ ಈತ ವೃದ್ದೆಯ ಸಹೋದರನ ಮಗನಾಗಿತ್ತು ಸಂಬಂಧದಲ್ಲಿ ಅಳಿಯನಾಗಿರುತ್ತಾನೆ. ಮದ್ಯ ವ್ಯಸನಿಯಾಗಿದ್ದ ಆದರ್ಶನಿಗೆ ಯಾವನೋ ಒಬ್ಬ ಕಾರ್ಪೇಂಟರ್ ಸಿಕ್ಕು ಎರಡು ಹಲಗೆ ಕೇಳಿರುತ್ತಾನೆ.
ಹಲಗೆ ಕದಿಯಲು ಅತ್ತೆ ಸಾವಿತ್ರಮ್ಮನ ಮನೆಗೆ ನುಗ್ಗಿ ಎರಡು ಹಲಗೆ ಕದಿಯಲು ಮನೆಗೆ ನುಗ್ಗಿರುತ್ತಾನೆ. ಹಲಗೆ ಶಬ್ದಕೇಳಿದ ಸಾವಿತ್ರಮ್ಮ ಎದ್ದು ಬಂದು ನೋಡಿದ ಅಜ್ಜಿಗೆ ಅಳಿಯನ ಘನಂ ಧಾರಿ ಕೆಲಸ ಕೆಲಸಕಂಡು ಬೈಯುತ್ತಾಳೆ. ಜೀವನಪರ್ಯಾಂತ ಕದಿಯುವುದೇ ಕಾಯಕ ಮಾಡಿಕೊಂಡಿದ್ದೀಯ. ಕದಿಯಲು ನಮ್ಮ ಮನೆಯೇ ಬೇಕಾ ಎಂದು ಬೈಯುತ್ತಾಳೆ.
ಆರೋಪಿ ಆದರ್ಶ |
ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ ಆದರ್ಶ ಹತ್ತಿರಬಂದ ವೃದ್ದೆಯ ಕುತ್ತಿಗೆ ಹಿಡಿದು ಕೊಲೆ ಮಾಡಿದ್ದಾನೆ. ಅಜ್ಜಿಯನ್ನ ಹಾಲ್ ನಲ್ಲೇ ಮಲಗಿಸಿ ಹಲಗೆ ಎತ್ತುಕೊಂಡು ಪರಾರಿಯಾಗುತ್ತಾನೆ. ಪರಾರಿಯಾದ ಆದರ್ಶ ಹಲಗೆಯನ್ನ ಕಾಡಿಗೆ ಬಿಸಾಕಿ ಮನೆಗೆ ಹೋಗಿ ಮಲಗಿರ್ತಾನೆ. ನಿನ್ನೆ ಕುಂಸಿ ಪೊಲೀಸರು ಖಡಕ್ ಕಾರ್ಯಾಚರಣೆಗೆ ಬಂಧನವಾಗಿದೆ.
ಇದನ್ನೂ ಓದಿ-https://www.suddilive.in/2024/08/blog-post_58.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ