ಸುದ್ದಿಲೈವ್/ಶಿಕಾರಿಪುರ
ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ.
ಗಿರೀಶ್ ಎಂಬ 30 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ಪಿಡಬ್ಲೂಡಿ ಕಚೇರಿಯಲ್ಲಿ ಡಿದರ್ಜೆ ನೌಕರರಾಗಿದ್ದು, ತಂದೆ ಮತ್ತು ತಾಯಿ ಇಬ್ಬರೂ ಮೈಸೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದರು.
ನಿನ್ನೆ ಶಿಕಾರಿಪುರ ಮಂಗಳ ಭವನದ ಎದುರಿನ ಪಿಡಬ್ಲೂಡಿ ಕ್ವಾಟ್ರಸ್ ನ ಮನೆಯಲ್ಲಿ ಗಿರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಆತ್ಮಹತ್ಯೆಯ ಬಗ್ಗೆ ಡೆತ್ ನೋಟ್ ವೊಂದು ದೊರೆತಿದ್ದು, ಡೆತ್ ನೋಟ್ ನಲ್ಲಿ ತನ್ನ ಆತ್ಮಹತ್ಯೆಗೆ ಯಾರೂ ಕಾರಣವಲ್ಲವೆಂದು ಬರೆದಿರುವುದು ಪತ್ತೆಯಾಗಿದೆ.
ಪ್ರಕರಣ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಿರೀಶ್ ಮದುವೆಯಾಗಿರಲಿಲ್ಲವೆಂದು ತಿಳಿದು ಬಂದಿದೆ. ಗಿರೀಶ್ ಜೀವನೋಪಯಕ್ಕಾಗಿ ಮದುವೆ ಮನೆಯಲ್ಲಿ ಡೆಕೋರೇಷನ್ ಗಳನ್ನ ಮಾಡಿಕೊಂಡು ಬದುಕುತ್ತಿದ್ದ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ