ಆತ್ಮಹತ್ಯೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆತ್ಮಹತ್ಯೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಸೆಪ್ಟೆಂಬರ್ 6, 2024

ಸಾಲ ಬಾದೆಗೆ ರೈತ ಆತ್ಮಹತ್ಯೆ

 


ಸುದ್ದಿಲೈವ್/ಶಿವಮೊಗ್ಗ


ಸಾಲಬಾದೆಗೆ ಬೆದರಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ದ್ಯಾವಿನಕೆರೆಯಲ್ಲಿ ನಡೆದಿದೆ.


ತಿಮ್ಮರಾಜು ಎಂಬ 50 ವರ್ಷದ ರೈತ ದ್ಯಾವಿನಕೆರೆಯ ಸರ್ವೆ ನಂ 83 ರಲ್ಲಿ ಎರಡು ಎಕರೆ ಜಮೀನು ಹೊಂದಿದ್ದರು. ಅರ್ಧ ಅಡಿಕೆ ಅರ್ಧ ಜೋಳ ಬೆಳೆದಿದ್ದರು. ಕಳೆದ ವರ್ಷ ಜೋಳ ಬೆಳೆದರೂ ಮೂರು ಬೋರು ಕೈಕೊಟ್ಟ ಪರಿಣಾಮ ಬೆಳೆ ನಾಶವಾಗಿತ್ತು.


ಹೊಸ ಬೋರು ಕೊರೆಯಿಸಲು ಮತ್ತು ಬೆಳೆ ಸಾಲವಾಗಿ ಡಿಸಿಸಿ ಬ್ಯಾಂಕ್ ನಲ್ಲಿ 2,20,000 ಸಾವಿರ ರೂ. ಹಣವನ್ನ ಸಾಲ ಮಾಡಿದ್ದರು. ಈ ವರ್ಷವೂ ಅತಿವೃಷ್ಠಿಯಿಂದಾಗಿ ಜೋಳ ಕೈಕೊಟ್ಟಿದೆ. ಈ ವಿಷಯವಾಗಿ ತಿಮ್ಮರಾಜು ಮಗನ ಬಳಿ ಹೇಳಿಕೊಂಡಿದ್ದರು.


ಮಗನೂ ಸಹ ಹೇಗಾದರೂ ಸಾಲ ತೀರಿಸೋಣ ಅದರ ಬಗ್ಗೆ ಚಿಂತಿಸ ಬೇಡಿ ಎಂದು ಧೈರ್ಯ ನೀಡುದ್ದರು. ನಿನ್ನೆ ಜಮೀನಿಗೆ ಹೋಗಿಬರುವುದಾಗಿ ಹೇಳಿ ಹೊಲದ ಕಡೆಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಬಾರದ ತಿಮ್ಮರಾಜುವಿಗೆ ಮಗಳು ಕರೆ ಮಾಡಿದಾಗ ತೊದಲು ಮಾತನಾಡಿದ್ದಾರೆ.


ಎಲ್ಲಿದ್ದೀರ ಎಂದಾಗ ತೋಟದಲ್ಲಿ ಇರುವುದಾಗಿ ಹೇಳಿದ್ದರು. ತಕ್ಷಣ ಮಗಳು ಅಳಿಯ ಸ್ಥಳಕ್ಕೆ ಧಾವಿಸಿದ್ದಾರೆ. ಮಲಗಿಕೊಂಡು ವಾಂತಿ ಮಾಡುತ್ತಿದ್ದ ತಿಮ್ಮರಾಜುವರನ್ನ ತಕ್ಷಣವೇ ಮೆಗ್ಗಾನ್ ಗೆ ಕರೆತರಲಾಗಿತ್ತು‌. ನಿನ್ನೆ ಮಧ್ಯಾಹ್ನದಿಂದ ಸಂಜೆಯವರೆಗೆ ಈ ಘಟನೆ ಸಂಭವಿಸಿದೆ.


ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮರಾಜು (50) ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಪ್ರಕರಣ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುಧವಾರ, ಸೆಪ್ಟೆಂಬರ್ 4, 2024

ನೇಣು ಬಿಗಿದುಕೊಂಡು ಆತ್ಮಹತ್ಯೆ



ಸುದ್ದಿಲೈವ್/ಶಿವಮೊಗ್ಗ


ಕಾಚಿನಕಟ್ಟೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದು ಆತನ ಮೃತ ದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಯಲ್ಲಿರಿಸಲಾಗಿದೆ. 


ಕಾಚಿನಕಟ್ಟೆಯಲ್ಲಿ ಗೋವಿಂದ ರಾಜು ಎಂಬ 45 ವರ್ಷದ ವ್ಯಕ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಆತ್ಮಹತ್ಯೆಯ ಬಗ್ಗೆ ಹಲವು ಗುಮಾನಿಗಳು ಹರಡಿದೆ. 


ಗೋವಿಂದ್ ರಾಜುಗೆ ಮದುವೆಯಾಗಿ 20 ವರ್ಷ ಕಳೆ್ಇದೆ. ಮಕ್ಕಳಾಗಿರಲಿಲ್ಲ. ಭದ್ರಾವತಿಯ ಜನ್ನಾಪುರದ ಈತನಿಗೆ ಹಂಡತಿ ಮನೆಯಿಂದ ಕಾಚನಕಟ್ಟೆಯಲ್ಲಿ ಒಂದು ಎಕರೆ ಜಮೀನು ದೊರೆತಿತ್ತು. ಅಲ್ಲಿ ಮನೆಕಟ್ಟಿಕೊಂಡಿದ್ದ ಗೋವಿಂದ ರಾಜು ಇಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ‌ 


ಭದ್ರಾವತಿ ಕನೆಕ್ಷನ್ ಇರುವುದರಿಂದ ಗೋವಿಂದರಾಜುಗೆ ಕಾನೂನು ಬಾಹಿರ ಚಟುವಟಿಕೆಯ ಕನೆಕ್ಷನ್ ಇತ್ತ ಎಂಬ ಗುಮಾನಿ ಕೇಳಿ ಬರುತ್ತಿದೆ. ಆದರೆ ಆತನ ಕುಟುಂಬ ಕಾನೂನು ಬಾಹಿರ ಕನೆಕ್ಷನ್ ಇಲ್ಲ ಎಂದು ಹೇಳುತ್ತಿದೆ. ಈ ಪ್ರಕರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. 


ಒಂದು ವೇಳೆ ಈ ಘಟನೆ ಸತ್ಯವಾಗಿದ್ದರೆ, 15 ದಿನಗಳಲ್ಲಿ ನಾಲ್ಕು ಸಾವು ಕಾನೂನು ಬಾಹಿರ ಚಟುವಟಿಕೆಗೆ ಬಲಿಯಾದಂತೆ ಆಗುತ್ತದೆ. ವಿಲ್ಸನ್, ಗೋಣಿ ಬೀಡಿನ ಕಂಠಿ, ಪ್ರದೀಪ ಈಗ ಗೋವಿಂದ ರಾಜು ಬಲಿಯಾದಂತೆ ಆಗಿದೆ. 

ಶುಕ್ರವಾರ, ಆಗಸ್ಟ್ 30, 2024

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

 


ಸುದ್ದಿಲೈವ್/ಶಿಕಾರಿಪುರ


ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ. 


ಗಿರೀಶ್ ಎಂಬ 30 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ಪಿಡಬ್ಲೂಡಿ ಕಚೇರಿಯಲ್ಲಿ ಡಿದರ್ಜೆ ನೌಕರರಾಗಿದ್ದು, ತಂದೆ ಮತ್ತು ತಾಯಿ ಇಬ್ಬರೂ ಮೈಸೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದರು. 



ನಿನ್ನೆ  ಶಿಕಾರಿಪುರ ಮಂಗಳ ಭವನದ ಎದುರಿನ ಪಿಡಬ್ಲೂಡಿ ಕ್ವಾಟ್ರಸ್ ನ ಮನೆಯಲ್ಲಿ ಗಿರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಆತ್ಮಹತ್ಯೆಯ ಬಗ್ಗೆ ಡೆತ್ ನೋಟ್ ವೊಂದು ದೊರೆತಿದ್ದು,  ಡೆತ್ ನೋಟ್ ನಲ್ಲಿ ತನ್ನ ಆತ್ಮಹತ್ಯೆಗೆ ಯಾರೂ ಕಾರಣವಲ್ಲವೆಂದು ಬರೆದಿರುವುದು ಪತ್ತೆಯಾಗಿದೆ. 


ಪ್ರಕರಣ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಿರೀಶ್ ಮದುವೆಯಾಗಿರಲಿಲ್ಲವೆಂದು ತಿಳಿದು ಬಂದಿದೆ. ಗಿರೀಶ್ ಜೀವನೋಪಯಕ್ಕಾಗಿ ಮದುವೆ ಮನೆಯಲ್ಲಿ ಡೆಕೋರೇಷನ್ ಗಳನ್ನ ಮಾಡಿಕೊಂಡು ಬದುಕುತ್ತಿದ್ದ ಎನ್ನಲಾಗಿದೆ. 

ಮಂಗಳವಾರ, ಆಗಸ್ಟ್ 27, 2024

ಸಾಲ ಬಾದೆಗೆ ರೈತ ಆತ್ಮಹತ್ಯೆ



ಸಾಗರ/ಶಿವಮೊಗ್ಗ


ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕು ಕುದರೂರು ಗ್ರಾ.ಪಂ ಬೈನೆಮನೆಯಲ್ಲಿ ನಡೆದಿದೆ. 


ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ರೈತನನ್ನ ಆಶೋಕ(42) ಎಂದು ಗುರುತಿಸಲಾಗಿದೆ. ಮೃತ ರೈತನಿಗೆ ಸೇರಿದ್ದ ಎರಡು ಎಕರೆ ಅಡಕೆ ತೋಟದಲ್ಲಿ  ಕೊಳೆ ರೋಗ ಕಾಣಿಸಿಕೊಂಡಿತ್ತು. 


ರಾಷ್ಟ್ರೀಕೃತ ಬ್ಯಾಂಕ್ ಕೆನರಾ ಬ್ಯಾಂಕ್ ,ತುಂಗಾ.. ಇತರ ಸಂಘ ಸಂಸ್ಥೆಗಳಿಂದ  ರೈತ ಅಶೋಕ್ ಸಾಲ ಪಡೆದಿದ್ದರು. ಒಟಿಎಸ್- One Time Settlement ನೋಟಿಸ್ ನೀಡಲಾಗಿತ್ತು. ಮೃತ ಅಶೋಕ್  ರೈತಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

ಶನಿವಾರ, ಆಗಸ್ಟ್ 24, 2024

ಆನ್ ಲೈನ್ ಇನ್ ವೆಸ್ಟ್ ಮೆಂಟ್-ಯುವಕ ಆತ್ಮಹತ್ಯೆ




ಸುದ್ದಿಲೈವ್/ಭದ್ರಾವತಿ


ಭದ್ರಾವತಿಯಲ್ಲಿ ಸಾಲು ಸಾಲು ಆತ್ಮಹತ್ಯೆ ಮುಂದುವರೆದಿದೆ. ಮೊನ್ನೆ ಅಪ್ಪ ಮಾಡಿದ ಸಾಲಕ್ಕೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಸಿದ ಬೆನ್ನಲ್ಲೇ ಪೇಪರ್ ಟೌನ್ ನಡೆದಿದೆ.


ಪೇಪರ್ ಟೌನ್ 6 ನೇ ನಿವಾಸಿ ಪ್ರದೀಪ್ ಸುಮಾರು 27 ವರ್ಷ ಯುವಕ ಆನ್ ಲೈನ್  ನಲ್ಲಿ ಹಣತೊಡಗಿಸಿ ಕೈಸುಟ್ಟಿಕೊಂಡ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. 


ಆನ್ ಲೈನ್ ಇನ್ ವೆಸ್ಟ್ ಮೆಂಟ್ ಗಾಗಿ ಸುಮಾರು 1.5 ಲಕ್ಷ ರೂ. ಇನ್‌ವೆಸ್ಟ್ ಮೆಂಟ್ ಮಾಡಿದ್ದ ಪ್ರದೀಪ್ ಇಷ್ಟು ಹಣವನ್ನ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದನು. ಮಾಚೇನಹಳ್ಳಿಯ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಪ್ರದೀಪ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 


ಮೊನ್ನೆ ಸ್ಟೀವನ್ ಎಂಬ ಯುವಕ ಅಪ್ಪ ಮಾಡಿಕೊಂಡ ಸಾಲಕ್ಕೆ ಉತ್ತರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆ ಪ್ರದೀಪ್ ಕನಸುಕಟ್ಟಿಕೊಂಡು ಇನ್ ವೆಸ್ಟ್ ಮೆಂಟ್ ಮಾಡಿದ್ದ. ಕನಸು ಕೈಕೊಟ್ಟ ಪರಿಣಾಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.