ಗುರುವಾರ, ಆಗಸ್ಟ್ 8, 2024

ಪತ್ರಕರ್ತರನ ಹೆಸರು ಬರೆದಿಟ್ಟು ಜಮೀನ್ದಾರ್ ಸಾವು?



ಸುದ್ದಿಲೈವ್/ಶಿವಮೊಗ್ಗ


ಕೀರ್ತಿನಗರದಲ್ಲಿ ಜಮೀನ್ದಾರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಮರ್ಯಾದೆಗೆ ಅಂಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರ ಎಂಬ ಅನುಮಾನಕ್ಕೆ ಈ ಪ್ರಕರಣ ಎಡೆಮಾಡಿಕೊಟ್ಟಿದೆ. 


ಪತ್ರಕರ್ತರೊಬ್ಬರ ಹೆಸರು ಬರೆದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ. ಪತ್ರಕರ್ತರನ್ನ ಪೊಲೀಸರು ಠಾಣೆಗೆ ಕರೆತಂದು ಕೂರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. 


ಜಮೀನ್ದಾರಿಕೆ ಮಾಡಿಕೊಂಡಿದ್ದ ನಂಜುಂಡಪ್ಪ(68) ಎಂಬುವರು ಸಾಲ ನೀಡಿದ್ದು ಸಾಲಪಡೆಯಲು ಹರಸಾಹಸ ಪಟ್ಟಿದ್ದಾರೆ. ಹರಸಾಹಸ ಪಟ್ಟ ನಂಜುಂಡಪ್ಪನವರಿಗೆ ಮಾರ್ಯಾದೆ ಕಳೆಯುವ ಪ್ರಯತ್ನವೂ ನಡೆದಿದೆ. ಇದರಿಂದ ಬೇಸತ್ತು ಆತ್ಮಹತ್ಯೆಯ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ. 


ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೀರ್ತಿನಗರದಲ್ಲಿ ಪ್ರಕರಣ ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ