ಬುಧವಾರ, ಆಗಸ್ಟ್ 28, 2024

ಖಾಸಗಿ ಹೋಟೆಲ್ ನಲ್ಲಿ ವಿದ್ಯಾರ್ಥಿಗಳು ಮಾಡುತ್ತಿದ್ದದ್ದು ಏನು? ಕ್ಲಾಸ್ ತೆಗೆದುಕೊಂಡ ತಾಯಿ



ಸುದ್ದಿಲೈವ್/ಸಾಗರ


ಕಾಲೇಜಿಗೆ ಚಕ್ಕರ್ ಹಾಕಿ ವಿದ್ಯಾರ್ಥಿಗಳು ಖಾಸಗಿ ಹೋಟೆಲ್ ನಲ್ಲಿ ಕುಳಿತು ಫ್ರೀ ಫೈರ್, ಪಬ್ಜಿ ಆಟ ಆಡುದ್ರಾ? ಎಂಬ ವಿಡಿಯೋ ಸಾಗರದಲ್ಲಿ ತಲ್ಲಣ ಉಂಟು ಮಾಡಿದೆ. 


ಸಾಗರದ ಅಶೋಕ ರಸ್ತೆಯಲ್ಲಿನ ಹೋಟೆಲ್ ನಲ್ಲಿವಾರಗಟ್ಟಲೇ ಕಾಲೇಜಿಗೆ ಹಾಜರಾಗದ ಮಗನನ್ನ ಹುಡುಕಿಕೊಂಡು ಬಂದ ತಾಯಿಯೊಬ್ವರಿಗೆ ಪ್ರಿನ್ಸಿಪಾಲ್ ರಿಂದ ಪೋಷಕರೊಬ್ಬರಿಗೆ ದೂರು ನೀಡಿದ್ದಾರೆ. 


ದೂರಿನ ಅಧಾರದ ಮೇಲೆ ಮಗನನ್ನ ಹುಡುಕಿ ಬಂದ ತಾಯಿಗೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿ ಸೇರಿರುವುದು ಪತ್ತೆಯಾಗಿದೆ. ಕಾಲೇಜುಗಳಿಗೆ ಚಕ್ಕರ್ ಹಾಕಿ ಆನ್ ಲೈನ್ ಗೇಮ್ ನಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ತಾಯಿಯ ಅಳಲಾಗಿದೆ. 


ಖಾಸಗಿ ಹೋಟೆಲ್ ನಲ್ಲಿ ತಾಯಿಯನ್ನ ಕಂಡ ವಿದ್ಯಾರ್ಥಿಗಳು ಎದ್ದುಬಿದ್ನೋ ಎಂದು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಈ ವಿಡಿಯೊ ಎರಡು ಮೂರು ದಿನಗಳ ಹಿಂದಿನ ವಿಡಿಯೋ ಆಗಿದೆ. ಆದರೆ ಪೊಲೀಸ್ ಇಲಾಖೆ ಬೇರೆಯದೆ ಸ್ಪಷ್ಟನೆ ನೀಡಿದೆ.


ಪಬ್ಜಿ ಆಗಲಿ ಅಥವಾ ಆನ್ ಲೈನ್ ದಾಳಿಯಾಗಲಿ ಪತ್ತೆಯಾಗಿಲ್ಲ. ಅದು ವಿದ್ಯಾರ್ಥಿಯೊಬ್ಬನ ಬರ್ತ್ ಡೇ ಪಾರ್ಟಿ ಆಗಿತ್ತು. ವಿದ್ಯಾರ್ಥಿಗಳಲ್ಲಿ ಒಬ್ಬ ಕಾಲೇಜಿಗೆ ಹೋಗದ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಹುಡುಕಿಕೊಂಡು ಬಂದಿದ್ದಾರೆ ಎಂಬುದು ಪೊಲೀಸ್ ಇಲಾಖೆಯ ಸ್ಪಷ್ಟನೆ ಆಗಿದೆ. 


ಆದರೆ ಎರಡು ಮೂರು ದಿನಗಳ ವರೆಗೆ ಹೋಟೆಲ್ ಬಂದ್ ಮಾಡಲಾಗಿದೆ. ಅಲ್ಲಿ ಬೇರೆಯಾವ ಚಟುವಟಿಕೆಗಳು ನಡೆದಿಲ್ಲ ಎಂಬುದನ್ನೂ ಇಲಾಖೆ ಸ್ಪಷ್ಟಪಡಿಸಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ