ಬುಧವಾರ, ಆಗಸ್ಟ್ 28, 2024

ಸೂಡಾ ಶೆಡ್ ಪರ ವಿರುದ್ಧದ ಹೋರಾಟ

 


ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗದ ರೇಣುಕಾಚಾರ್ಯರ ಹತ್ಯೆ ಪ್ರಕರಣದಲ್ಲಿ ಶೆಡ್ ನ ವಿಷಯ ಕರ್ನಾಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ ವಿನೋಬ ನಗರದ ಸೂಡ ಕಚೇರಿಯಲ್ಲಿನ ಶೆಡ್ ಈಗ ಎರಡು ಸಂಘಟನೆಯ ಪ್ರತಿಭಟನೆ ಕಾರಣವಾಗಿದೆ.


ಇಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟ ರಸ್ತೆಯ ಮೇಲೆ ಸೂಡದವರು ಕಚೇರಿ ನೌಕರರ ವಾಹನ ನಿಲುಗಡೆಗೆ ನಿರ್ಮಿಸಿರುವ ಅನಧಿಕೃತ ಶೆಡ್ ತರವಿಗೆ ಅಹೋ ರಾತ್ರಿ ಧರಣಿಗೆ ಮುಂದಾಗಿದ್ದಾರೆ.


ತಕ್ಷಣವೇ ರಸ್ತೆಯಲ್ಲಿರುವ ಶೆಡ್ ತೆರವುಗೊಳಿಸಬೇಕು. ಸಾರ್ವಜನೊಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಕಾನೂನು ಬಾಹಿರವಾಗಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸೂಡ ಆಯುಕ್ತ ವಿಶ್ವನಾಥ್ ಮುತ್ತಜ್ಜಿ, ನಗರ ಯೋಜನೆ ಸದಸ್ಯೆ ರೂಪ, ಸಹಾಯಕ ಇಂಜಿನಿಯರ್ ಬಸವರಾಜುಮತ್ತು ಗಂಗಾಧರ್ ಸ್ವಾಮಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವೇದಿಕೆ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ.


ಆದರೆ ಇದರ ವಿರುದ್ಧವಾಗಿ ಭಗತ್ ಸಿಂಗ್ ಕನ್ನಡ ಯುವಕ ಸಂಘ ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಭಗತ್ ಸಿಂಗ್ ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಶೆಡ್ ನ್ನ ನಿರ್ಮಾಣ ಪ್ರಾಧಿಕಾರದ ಕಟ್ಟಡ ನಕ್ಷೆಯಂತೆಯೇ ಪಾರ್ಕಿಂಗ್ ಜಾಗದಲ್ಲಿ ನಿರ್ಮಿಸಿರುವುದು ಸರಿಯಿದೆ. ಸೂಡಾ ಮತ್ತು ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಿದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ಸೂಡಾ ಶೆಡ್ ನ ತೆರವಿನ ಹೋರಾಟದ ಹಿಂದೆ ವೇದಿಕೆಯು ಬೇರೆಂದು ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಹೊರಟಿದೆ ಎಂದು ಕನ್ನಡ ಯುವಕರ ಸಂಘ ದೂರಿದೆ.


ಒಟ್ಟಿನಲ್ಲಿ ಎರಡೂ ಸಂಘಟನೆಗಳ ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ