ಗುರುವಾರ, ಆಗಸ್ಟ್ 29, 2024

ಲಕ್ಷ್ಮಣ್ ಮತ್ತು ಜಗದೀಶ್ ಶಿವಮೊಗ್ಗ ಜೈಲಿಗೆ ಶಿಫ್ಟ್

 


ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ನಲ್ಲಿದ್ದ ಎ-13 ಲಕ್ಷಣ್  ಹಾಗೂ ಎ-6 ಜಗದೀಶ್ ರನ್ನ ಬೆಂಗಳೂರು ಜೈಲಿನಿಂದ ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ.


ನಿನ್ನೆ ಕೋರ್ಟ್ ಕಲಾಪ ಮುಗಿಸಿಕೊಂಡ ದರ್ಶನ್ ಗ್ಯಾಂಗ್ ನಲ್ಲಿದ್ದ ಸುಮಾರು 17 ಜನ ಆರೋಪಿಗಳನ್ನ   ಮೈಸೂರು, ವಿಜಯಪುರ, ಕಲ್ಬುರ್ಗಿ, ಧಾರವಾಡ, ಶಿವಮೊಗ್ಗ ಜೈಲಿಗೆ ವರ್ಗಾಯಿಸಲಾಗಿದೆ. ಪವಿತ್ರಗೌಡ ಮತ್ತೋರ್ವ ಸೇರಿ ಬೆಂಗಳೂರಿನ ಪರಪ್ಪನ ಜೈಲಿನಲ್ಲಿ ಉಳಿದುಕೊಂಡಿದ್ದಾರೆ.



ಪರಪ್ಪನ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳು ಮತ್ತು ಸಜಾಬಂಧ ಖೈದಿಗಳ ಜೊತೆ ಸೇರಿ ಮಜಾ ಉಡಾಯಿಸಿದ್ದರ ಹಿನ್ನಲೆಯಲ್ಲಿ ದರ್ಶನ್ ಅವರನ್ನ ಬಳ್ಳಾರಿಗೆ ಶಿಫ್ಟ್ ಮಾಡಿದರೆ ಆತನ ಸಹಚರರನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ