ಶನಿವಾರ, ಆಗಸ್ಟ್ 10, 2024

ವಿಸಿಬಿಲಿಟಿ ಸಮಸ್ಯೆ ಶಿವಮೊಗ್ಗ ಮಾತ್ರವಲ್ಲ ಎಲ್ಲಡೆ ಇದೆ-ಎಂಬಿಪಾ




ಸುದ್ದಿಲೈವ್/ಶಿವಮೊಗ್ಗ


ವಿಸಿಬಲಿಟಿ ಕೊರತೆಯಿಂದಾಗಿ ಶಿವಮೊಗ್ಗ ಏರ್‌ಪೋರ್ಟ್ ನಲ್ಲಿ ವಿಮಾನಗಳ ಹಾರಾಟ ರದ್ದಾಗುತ್ತಿರುವ ವಿಷಯದ ಕುರಿತು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಕ್ರ ವಹಿಸುವ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. 


ನನಗಿರುವ ಮಾಹಿತಿ ಪ್ರಕಾರ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಗೆ ವಿಸಿಬಿಲಿಟಿಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ವಿಸಿಬಿಲಿಟಿಯ ಸಮಸ್ಯೆ ಕೇವಲ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಮಾತ್ರವಲ್ಲ, ದೇಶದ ಉಳಿದ ಏರ್ಪೋರ್ಟ್ ಗಳಲ್ಲೂ ಇದೇ ರೀತಿಯ ಸಮಸ್ಯೆ ಇದೆ ಎಂದರು. 


ವಿಸಿಬಿಲಿಟಿಯ ಸಮಸ್ಯೆ ಇದ್ದಾಗ ರಿಸ್ಕ್ ತೆಗೆದುಕೊಂಡು ಲ್ಯಾಂಡಿಂಗ್ ಅಥವಾ ಟೇಕಾಫ್ ಮಾಡಲಾಗುವುದಿಲ್ಲ. ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಕೇವಲ ವಿಸಿಬಿಲಿಟಿಯ ಸಮಸ್ಯೆ ಅಷ್ಟೇ ಅಲ್ಲ ಇತರ ಸಮಸ್ಯೆಗಳೂ ಇದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಕೆಲವೊಂದು ತಾಂತ್ರಿಕ ಸಲಕರಣೆಗಳ ಅಗತ್ಯವಿದೆ . ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು. 


ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನರಾರಂಭ ಕುರಿತ ವಿಷಯ


ಎಂಪಿಎಂ ಕಾರ್ಖಾನೆ ಪುನಾರಂಭದ ಸಂಬಂಧ ನಾನು ಅರಣ್ಯ ಸಚಿವ ಈಶ್ಕರ್ ಖಂಡ್ರೆ ಜೊತೆ ಚರ್ಚಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯನ್ನು ಸರ್ಕಾರ ನಿರ್ವಹಿಸಲು ಆಗುವುದಿಲ್ಲ. ಅದಕ್ಕಾಗಿ ಖಾಸಗಿಯವರ ಅಗತ್ಯವಿದೆ. ರಾಜ್ಯದಲ್ಲಿ ನೀಲಗಿರಿ ಮತ್ತು ಅಕೇಶಿಯಾ ಗಿಡ ಬೆಳೆಸಲು ನಿಷೇಧ ಇದೆ ಎಂದು ಸಚಿವರು ತಿಳಿಸಿದರು. 


ಹಾಗಾಗಿ ಕಾರ್ಖಾನೆಯನ್ನು ವಹಿಸಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ನಾವು ಹಾಲಿ ಕಾರ್ಖಾನೆಯ ಹೆಸರಿನಲ್ಲಿರುವ 30,000 ಹೆಕ್ಟರ್ ಪ್ರದೇಶದಲ್ಲಿರುವ ಅಕೇಶಿಯ ಮತ್ತು ನೀಲಗಿರಿ ಬಳಸಿಕೊಳ್ಳಲು ಅನುಮತಿ ಕೋರಿದ್ದೇವೆ. ಅರಣ್ಯ ಇಲಾಖೆಯ ಅನುಮತಿಯನ್ನು ಕೇಳಿದ್ದೇವೆ ಎಂದರು. 


ಕಾರ್ಖಾನೆಯ ಪುನರಾರಂಭದ ಸಂಬಂಧ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೀಲಗಿರಿ ಮತ್ತು ಅಕೇಶಿಯಾ  ಬೆಳಸಿ ಕಾರ್ಖಾನೆಯನ್ನು ಆರಂಭಿಸಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಇದನ್ನು ಬೆಳೆಸುವುದರಿಂದ ಅಂತರ್ಜಲ ಕುಸಿತವಾಗುತ್ತದೆ ಎಂದು ಹೇಳುತ್ತಿದ್ದಾರೆ ಈ ವಿಷಯದಲ್ಲಿ ನಮ್ಮ ಇಲಾಖೆ ಗಿಂತ ಅರಣ್ಯ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ ಅವರು ಸೂಕ್ತ ನಿರ್ಧಾರ ಕೈಗೊಂಡು ತಿಳಿಸುವುದಾಗಿ ಹೇಳಿದ್ದಾರೆ ಎಂದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ