ಸುದ್ದಿಲೈವ್/ಶಿವಮೊಗ್ಗ
ಅರಣ್ಯ ಪ್ರದೇಶದಲ್ಲಿ ಚಂದ್ರಗುತ್ತಿ ದೇವಸ್ಥಾನವಿದ್ದು ಅದರ ಕ್ಲಿಯರೆನ್ಸ್ ಗೆ ಕಾಯಲಾಗುತ್ತಿದೆ. 10 ಎಕರೆ ದೇವಸ್ಥಾನ ಜಾಗವೆಂದು ಗುರುತಿಸಲಾಗಿದೆ ಸಾಗರದ ಉಪವಿಭಾಗಾಧಿಕಾರಿ ಯತೀಶ್ ತಿಳಿಸಿದರು.
ಅವರು ಚಂದ್ರಗುತ್ತಿಯ ಕಾರ್ಯನಿರ್ವಾಹಣಾಧಿಕಾರಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ದೇವಸ್ಥಾನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಸಭೆಯಲ್ಲಿ ತಿಳಿಸಿದರು.
ದೇವಸ್ಥಾನದಲ್ಲಿ 6 ಕೋಟಿ ಹಣವಿದೆ. 20 ಎಕರೆ ಪರ್ಯಾಯ ಜಾಗವನ್ನ ಅರಣ್ಯ ಇಲಾಖೆ ಕೊಡಬೇಕು. ಇದು ಸರ್ವೆ ಆಗಬೇಕು. ಭಾರತೀಯಪುರಾತತ್ವ ಸಹ ದೇವಸ್ಥಾನದ ಅಭಿವೃದ್ಧಿಗೆ ಅನುಮತಿ ಬೇಕಿದೆ. ದೇವರ ವಿಗ್ರಹದಿಂದ 100ಮೀಟರ್ ಒಳಗೆ ಯಾವುದೇ ಅಭಿವೃದ್ಧಿಯನ್ನ ದೇವಸ್ಥಾನ ಆಡಳಿತ ಮಂಡಳಿ ಮಾಡುವ ಹಾಗಿಲ್ಲ ಎಂಬ ಕಾರಣಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
ಈ ವೇಳೆ ವಿಷಯ ಪ್ರಸ್ತಾಪಿಸಿದ ಸಚಿವರು ತಕ್ಷಣ ದೇವಸ್ಥಾನ ಸೋರುತ್ತಿರುವುದು ದುರಸ್ಥಿ ಆಗಬೇಕು. ಬಾಗಿಲು ಹಾಳಾಗಿದೆ. ಮೆಟ್ಟಿಲುಗಳನ್ನ ಪುರಾತತ್ವ ಇಲಾಖೆ ಕೈಗೊಳ್ಳಬೇಕು. ದೇವಸ್ಥಾನದ ಮುಂಭಾಗದಲ್ಲಿ ತಾತ್ಕಾಲಿಕ ಶೀಟ್ ಅಳವಡಿಸಬೇಕು. ಹಣವಿಲ್ಲವೆಂದರೆ ನಾವು ಸಹಾಯ ಮಾಡುತ್ತೇವೆ ಎಂದು ಪುರಾತತ್ವ ಇಲಾಖೆಗೆ ತಿಳಿಸಿದರು.
ಯಾಗಶಾಲೆ ಪುನರ್ ಸ್ಥಾಪಿಸಬೇಕಿದೆ. ಯಾಗಶಾಲೆಯನ್ನ ಮಲೆನಾಡಿನ ಶೈಲಿಯಲ್ಲಿ ನಿರ್ಮಿಸಬೇಕು. ಚಪ್ಪಲಿ ಸ್ಟ್ಯಾಂಡ್ ಗೆ ಅವಕಾಶ ಕಲ್ಪಿಸಬೇಕು. ಮಕ್ಕಳಿಗೆ ಹಾಲುಣಿಸುವ ಕೊಠಡಿಯನ್ನ ಪುರಾತತ್ವ ನಿರ್ಮಿಸುವುದು ಬೇಡ ಇದನ್ನ ಆಡಳಿತ ಮಂಡಳಿ ನಡೆಸಲಿದೆ ಎಂದರು.
ದೀಪಾಲಂಕಾರ ಚೆನ್ನಾಗಿರಬೇಕು. ಅದಕ್ಕೆ ಹಣದ ವ್ಯವಸ್ಥೆ ಮಾಡೋಣ. ತಾತ್ಕಲಿಕ ದೀಪಾಲಾಂಕಾರ ಸರಿಯಿಲ್ಲ. ಪುರಾತತ್ವ ಇಲಾಖೆ ದೆಹಲಿಯ ಹೆಡ್ ಆಫೀಸ್ ಗೆ ಮನವಿ ಪತ್ರ ಕಳುಹಿಸಿದ ತಕ್ಷಣ ನನ್ನ ಕಚೇರಿಗೆ ನಿರಂತರ ಸಂಪರ್ಕದಲ್ಲಿರಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶೌಚಾಲಯ ನಿರ್ಮಾಣ ಮಾಡಿ ಇದರ ನಿರ್ವಾಹಣೆಯನ್ನ ಬೇರೆಯವರಿಗೆ ಕೊಡಬೇಕು. ಇದನ್ನ ದೇವಸ್ಥಾನದ ಕೆಳಭಾಗದಲ್ಲಿ ನಿರ್ಮಿಸೋಣ, ವಿಶ್ರಾಂತಿ ಗೃಹವನ್ನ ಚೌಲ್ಟ್ರಿಯಲ್ಲಿ ನಿರ್ಮಿಸುವ ಬಗ್ಗೆ ಗಮನಹರಿಸಬೇಕಿದೆ. ಇದಕ್ಕೆ ಸಚಿವರು ಶಬರಿ ಮಲೆಯಲ್ಲಿ ಅಯ್ಯಪ್ಪನ ಮಾಲೆ ಹಾಕಿ ಹೋದಾಗ ತಮಗೆ ಆಗಿರುವ ಅನುಭವ ಹಂಚಿಕೊಂಡು ವಸತಿ ಗೃಹದ ಬಗ್ಗೆ ಮಾಹಿತಿ ಹಂಚಿಕೊಂಡರು.
ಆದರೆ ಯಾವುದೇ ಕಾರಣಕ್ಕೂ ಅಡಿಗೆ ಮಾಡಲು ಅವಕಾಶ ಕಲ್ಪಿಸಬಾರದು. ಶೌಚಾಲಯವನ್ನ ಹೊರಗುತ್ತಿಗೆ ಕೊಡೋಣ. . ಸಮಿತಿಯಿಂದ ಕೊಡುವ ವ್ಯವಸ್ಥೆ ಬೇಡ. ಸ್ನಾನಗೃಹ ಮುಂತಾದುವು ಸ್ವಚ್ಛತೆ ಇರಬೇಕು. ಅಡಿಕೆ ಉಗುಳದಂತೆ ಎಚ್ಚರಿಕೆ ವಹಿಸಬೇಕು. ಯಾರು ಉಗಿಯುತ್ತಾರೋ ಅದನ್ನ ಸ್ವಚ್ಛ ಪಡಿಸುವಂತೆ ಮಾಡಬೇಕು.
ಡಿಜಿಟಲ್ ಸ್ಕ್ರೀನ್, ಸಿಆರ್ ಎಸ್ ಫಂಡ್ ನಲ್ಲಿ ಸಾಧ್ಯ ಇದ್ದರೆ ಅಳವಡಿಸೋಣ. ಮುಡಿಕೊಡುವುದು ಸಹ ದೇವಸ್ಥಾನದ ಕೆಳಗೆ ವ್ಯವಸ್ಥೆ ಮಾಡೋಣ. ಮುಡಿಕೊಡುವುದಕ್ಕೆ ದರನಿಗದಿ ಮಾಡಿ ಸ್ನಾನ ಉಚಿತವೆಂದು ಮಾಡೋಣ ಎಂದರು.
ಕಲ್ಯಾಣ ಭವನವನ್ನ ದುರಸ್ಥಿ ಮಾಡಿ, ದರ ಹೆಚ್ಚಿಸಬೇಕಿದೆ. ಈಗಿನ 5 ಸಾವಿರ ಮದುವೆಗೆ ದರ ನಿಗದಿ ಪಡಿಸಲಾಗಿದ್ದು ಅದರ ದರ ಹೆಚ್ಚಿಸೋಣ. ದರಹೆಚ್ಚಿಸಿನಿರ್ವಾಹಣೆಯನ್ನ ಹೊರ ಗುತ್ತಿಗೆ ನೀಡೋಣ. ಹುಂಡಿ ಹಣ ತಂದು ನಿರ್ವಹಿಸುವುದು ಬೇಡ. ಕಾರ್ ಪಾರ್ಕಿಂಗ್ ಗೆ ಜಾತ್ರೆ ವೇಳೆ ಖಾಸಗಿ ಜಾಗದಲ್ಲಿ ಗ್ರಾಪಂ ನಿರ್ವಹಿಸಲಿದೆ ಅದನ್ನ ಗ್ರಾಪಂ ದರ ನಿಗದಿ ಪಡಿಸಿ ಗುತ್ತಿಗೆ ಆಧಾರದ ಮೇರೆಗೆ ಹಣ ಸಂಗ್ರಹಿಸಲಿದೆ ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದರು.
ಮಳಿಗೆ ವಿಚಾರದಲ್ಲಿದೇವಸ್ಥಾನ ಆಡಳಿತ ಮಂಡಳಿ ಮತ್ತು ಗ್ರಾಮ ಪಂಚಾಯಿತಿ ನಡುವೆ ತಿಕ್ಕಾಟ ಇರುವುದು ಸಭೆಯಲ್ಲೇ ತಿಳಿದು ಬಂದಿದೆ. ಈಗಿರುವ 24 ಮಳಿಗೆಯಲ್ಲಿ 11 ತಿಂಗಳ ಗುತ್ತಿಗೆ ಹಿಡಿದಿರುತ್ತಾರೆ. ಇದನ್ನ ಆಡಳಿತ ಮಂಡಳಿ ನಿರ್ವಹಿಸುತ್ತದೆ.
ಇದನ್ನ ಹೊರತು ಪಡಿಸಿ ಅಮವಾಸೆ ಮತ್ತು ಹುಣ್ಣಿಮೆ ಜಾತ್ರೆಯ ವೇಳೆ ಅಂಗಡಿ ಅಳವಡಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರವಿದೆ. ಸ್ವಲ್ಪ ಇದನ್ನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಧಾನ ಮಾಡಲು ಎಸಿಗೆ ಸಚಿವರು ಸೂಚಿಸಿದರು.
ದೇವಸ್ಥಾನದ ಸುತ್ತಮುತ್ತ ಅಡಿಗೆ ಮಾಡಲು ಅವಕಾಶಬೇಡ, ಪ್ರಾಣಿಬಲಿ ಅವಕಾಶ ನೀಡತೆ ಸಭೆಯಲ್ಲಿ ಚರ್ಚೆಯಾಯಿತು. ಇಒ ಪ್ರಮೀಳ ಮಾತನಾಡಿ ಉತ್ತರ ಕರ್ನಾಟಕದ ಜನ ಇಲ್ಲಿ ಹೆಚ್ಚು ಬರ್ತಾರೆ. ಇವರು ಅಡುಗೆ ಮಾಡಿ ಎಡೆ ಇಟ್ಟು ಹೋಗುತ್ತಾರೆ ಎಂದರು.
ಇದನ್ನ ಹೊರಗಡೆ ಮಾಡಿ ದೇವಸ್ಥಾನಕ್ಕೆಎಡೆಯಿಡಲು ಅವಕಾಶ ಮಾಡಿಕೊಡಿ, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಆಗಬೇಕು. ಅದನ್ನ ಅರಣ್ಯ ಇಲಾಖೆ ಫಾಲೋ ಅಪ್ ಮಾಡಲು ಸೂಚಿಸಲಾಯಿತು. ಅಭಿವೃದ್ಧಿಯ ನಂತರ ಸೌವಧತ್ತಿ ಪ್ರಾಧಿಕಾರದಂತೆ ಚಂದ್ರಗುತ್ತಿ ರೇಣುಕಮ್ಮ ಪ್ರಾಧಿಕಾರ ನಿರ್ಮಿಸೋಣ ಎಂಬ ಭರವಸೆ ನೀಡಿದರು.
ದೇವಸ್ಥಾನದ ಹಣ 6 ಕೋಟಿ ಇದೆ ಅದು ಕೊರತೆ ಬಿದ್ದರೆ ಸರ್ಕಾರದಿಂದ ತರೋಣ, ಜಾತ್ರೆವೇಳೆ ತಾತ್ಕಾಲಿಕ ಶೆಡ್ ನಿರ್ಮಿಸಲು ಜರ್ಮನ್ ಟೆಂಟ್ ನಿರ್ಮಿಸೋಣ. ಇದರಿಂದ ಭಕ್ತಾಧಿಗಳಿಗೂ ಅನುಕೂಲವಾಗಲಿದೆ ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ