ಶುಕ್ರವಾರ, ಆಗಸ್ಟ್ 9, 2024

ಜವರಾಯನಾಗಿ ಕಾಡಿದ ಸಾಕಿದ ಬೆಕ್ಕು

 


ಸುದ್ದಿಲೈವ್/ಶಿವಮೊಗ್ಗ


ಸಾಕಿದ ಪ್ರಾಣಿಗಳಲ್ಲಿ ನಾಯಿ, ಬೆಕ್ಕು ಎಲ್ಲರಿಗೂ ಅಚ್ಚುಮೆಚ್ಚು.  ಸಾಕಿದ ಪ್ರಾಣಿಗಳ ಪ್ರೀತಿಯೂ ಸಹ ಮಾಲೀಕನ ಮೇಲೆ ಅಪಾರವಾಗಿರುವ ಉದಾಹರಣಗಳಿವೆ. ಕಿಲೋಮೀಟರ್ ಗಟ್ಟಲೆ ನಾಯಿಯೊಂದು ನಡೆದುಕೊಂಡು ಹೋಗಿರುವ ಉದಾಹರಣೆ ಇವೆ.  


ಆದರೆ ಸಾಕಿದ ಪ್ರಾಣಿನೇ ಜವರಾಯನಾಗಿ ಕಾಡಿದ ಉದಾಹರಣೆ ಶಿವಮೊಗ್ಗ ಜಿಲ್ಲೆಯ ತರಲಘಟ್ಟದಲ್ಲಿ ನಡೆದಿದೆ. ಸಾಕಿದ ಪ್ರಾಣಿ ಮನೆಯ ಯಜಮಾನನಿಗೆ ಕಚ್ಚಿ ಸಾವು ತಂದಿದೆ. ಯಜಮಾನಿನನ್ನ ಕಚ್ಚುವ ಮುನ್ನ ಬೆಕ್ಕು ನಾಯಿಯ ಮರಿಯನ್ನ ಕಚ್ಚಿ ಸಾವು ತಂದಿತ್ತು.‌


ಆದರೆ ತರಲಘಟ್ಟದ ಕ್ಯಾಂಪ್ ನಲ್ಲಿ ಯುವನೋರ್ವನ ಮೇಲೆ ದಾಳಿ ನಡೆಸಿ ಕಾಲಿಗೆ ಕಚ್ಚಿತ್ತು. ಕಾಲಿಗೆ ಆಯರ್ವೇದ ಔಷಧ ಮಾಡಿ ಪರಿಣಾಮ ನಂಜು ತೆಗೆಸಲಾಗಿತ್ತು.  ಪರಿಣಾಮ ಯುವಕ ಬದುಕುಳಿದಿದ್ದ. ಆದರೆ ಬೆಕ್ಕು ಯಜಮಾನಿಗೆ ಕಚ್ಚಿ ಸಾವಿಗೆ ಕಾರಣವಾಗಿದೆ.  


ತರಲಘಟ್ಟ ಕ್ಯಾಂಪ್ ನಲ್ಲಿ ಸಾಕಿದ ಬೆಕ್ಕು ಕಚ್ಚಿ ಗಂಗೀಬಾಯಿ (50) ಎಂಬ ಮಹಿಳೆ  ಸಾವಾಗಿದೆ.‌ ಬೆಕ್ಕು ಕಚ್ಚಿ ರೇಬಿಸ್ ಹರಡಿದ ಪರಿಣಾಮ ಮಹಿಳೆ ಸಾವಾಗಿದೆ ಎಂದು ಮಹಿಳೆಯ ಅಳಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. 


ಮಹಿಳೆ ಕಾಲಿಗೆ ಕಚ್ಚಿದ ಕಾರಣ ಐದು ಇಂಜೆಂಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಹುಷಾರಾದ ಕಾರಣ ಮಹಿಳೆ ಚೇತರಿಕೆ ಕಂಡಿದೆ. ಚೇತರಿಕೆ ಕಂಡ ಹುಮ್ಮಸ್ಸಿನಲ್ಲಿ ನಿರ್ಲಕ್ಷಿಸಲಾಗಿದೆ.  ನಾಟಿಗೆ ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆ ಸಾವುಕಂಡಿದ್ದಾರೆ. 


ಮಹಿಳೆಗೆ ಕಚ್ಚಿ ಬೆಕ್ಕು ಎಸ್ಕೇಪ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಹೆಚ್ ಒ ಬೆಕ್ಲು ಕಚ್ಚಿದರೂ ರೇಬಿಸ್ ಹರಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ