ಮಂಗಳವಾರ, ಆಗಸ್ಟ್ 27, 2024

ಕುವೆಂಪು ವಿವಿ ಕಳಪೆಯಾಗಿರುವ ಬಗ್ಗೆ ಶಾಸಕ ದೂರು

 


ಸುದ್ದಿಲೈವ್/ಶಿವಮೊಗ್ಗ


ರಾಜ್ಯದಲ್ಲಿ ಅತಿ ಕಳಪೆ ವಿಶ್ವ ವಿದ್ಯಾನಿಲಯವಾಗಿ ಕುವೆಂಪು ವಿವಿ ಬೆಳೆಯುತ್ತಿದೆ ಎಂದು ಎಂ ಎಲ್ ಸಿ ಡಿ.ಎಸ್ ಅರುಣ್ ದೂರಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ರಾಜ್ಯದಲ್ಲಿ 41 ವಿಶ್ವವಿದ್ಯಾಲಯಗಳಿವೆ ಇದರಲ್ಲಿ ಡೀಮ್ಡ್ ವಿಶ್ವವಿದ್ಯಾಲಯ 11 ಇದೆ. ನ್ಯಾಷನಲ್ ಇನಸ್ಟ್ಇಟ್ಯೂಟ್ 9 ಇದೆ. ಕುವೆಂಪು ವಿವಿಯಲ್ಲಿ ಆರಂಭದಲ್ಲಿ 4 ಜಿಲ್ಲೆ ಇತ್ತು. ಈಗ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಮಾತ್ರ ಯೂನಿವರ್ಸಿಟಿ ಉಳಿದುಕೊಂಡಿದೆ.  


ಏ.11 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದರೆ ಇಲ್ಲಿಯ ವರೆಗೂ ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ. 4 ತಿಂಗಳು 11 ದಿನ ಆದರೂ ಡಿಗ್ರಿ ಕಾಲೇಜು ಆರಂಭವಾಗಿಲ್ಲ. 84 ಕಾಲೇಜಿದೆ. ಇವುಗಳಿಗೆ ಪ್ರತಿವರ್ಷ ಅಫೀಲಿಯೇಷನ್ ಗೆ ಬರೆಯಲಾಗುತ್ತದೆ. ಅರ್ಜಿ ಬರೆದಾಗ ಸ್ಥಳೀಯ ತಪಾಸಣೆ ನಡೆಸಿ ಅನುಗುಣವಾಗಿ ಸೀಟು ನೀಡಲಾಗುತ್ತದೆ. 


84 ಕಾಲೇಜಿನ ಅಫಿಲಿಏಷನ್ ನನ್ನ ಸರ್ಕಾರಕ್ಕೆ ಕಳುಹಿಸುವ ವ್ಯವಸ್ಥೆಯನ್ನ ಆರಂಭಿಸಿದ್ದರಿಂದ ಕುವೆಂಪು ವಿವಿಯಲ್ಲಿ ಇದುವರೆಗೂ ಕಾಲೇಜುಗಳು ಆರಂಭವಾಗಿಲ್ಲ. ಬೇರೆ ವಿಶ್ವ ವಿದ್ಯಾನಿಲಯದ ಕಾಲೇಜುಗಳು ಆರಂಭವಾಗಿದೆ. ಅಫಿಲಿಯೇಷನ್ ಭಯ ಆರಂಭವಾಗಿದೆ. ಅಡ್ಮಿಷನ್ ಪೊರ್ಟಲ್ ನಲ್ಲಿ ನಡೆಯಬೇಕು. ನೀವು ಬಂದು ಕಂಡಿಲ್ಲ ಎಂಬ ಉತ್ತರ ಬರ್ತಾ ಇದೆ. ಅಧಿಕಾರ ವಿಕೇಂದ್ರಿಕರಣ ಇಲ್ಲವಾಗಿದೆ. 


ಕುವೆಂಪು ವಿವಿಯ ಎಲ್ಲಾ ಮಕ್ಕಳು ಶಾ ಹಾಕುತ್ತಿದ್ದಾರೆ. ವೈಯ್ಸ್ ಚಾನ್ಸಲರ್ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಹಿಂದುಳಿದ ಯೂನಿವರ್ಸಿಟಿ ಎಂದರೆ ಕುವೆಂಪು ವಿವಿ ಎಂದು ದೂರಿದರು.‌


ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ಸಂಬಳವಿಲ್ಲದಂತಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಆಟ ಆಡುತ್ತಿದ್ದಾರೆ. ಯೂನಿವರ್ಸಿಟಿಯ ಅಧಿಕಾರಿ ಮತ್ತು ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ