Girl in a jacket

ರಾಜ್ಯದ ಆರ್ಥಿಕ ವ್ಯವಸ್ಥೆ ವಿರುದ್ಧ ರಾಜ್ಯಪಾಲರಿಗೆ ದೂರು-ಡಿ.ಎಸ್.ಅರುಣ್



ಸುದ್ದಿಲೈವ್/ಶಿವಮೊಗ್ಗ


ರಾಜ್ಯ ಸರ್ಕಾರದ ಅಸಂವಿಧಾನಿಕ ಆರ್ಥಿಕ ವ್ಯವಸ್ಥೆಯನ್ನ ಖಂಡಿಸಿ ಎಂಎಲ್ ಸಿ ಅರುಣ್ ರಾಜ್ಯಪಾಲರಿಗೆ ದೂರು ನೀಡಿದ್ದು,  ಈ ಬಗ್ಗೆ ಸೂಕ್ತ ತನಿಖೆ ನಡುವಂತೆ ಆಗ್ರಹಿಸಿದರು. 


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶಾಸಕ ಡಿ.ಎಸ್.ಅರುಣ್, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳುಗೆ ಮತ್ತು ರಾಜ್ಯಪಾಲರಿಗೆ  ಮನವಿ ನೀಡಲಾಗಿದೆ. ಬೆಳಗಾವಿಯಲ್ಲಿ ನಡೆದ 2022-23 ರಲ್ಲಿ ಜಿಪಂ ನಲ್ಲಿ ಉಳಿದ ಅನುದಾನ ಬಳಕೆ ಹಣ ಉಳಿದಿರುವ ಬಗ್ಗೆ ಮಾಹಿತಿ ಕೇಳಲಾಗಿತ್ತು. 


1494 +350  ಕೋಟಿ ಹಣ ಉಳಿದಿತ್ತು ಎಂಬ ಮಾಹಿತಿ ನೀಡಲಾಗಿತ್ತು.  ನಿಗಮಗಳಲ್ಲಿ ಎಷ್ಟು ಹಣ ಬಳಕೆಯಾಗದೆ ಉಳಿಕೆಯಾಗಿದೆ ಎಂಬ ಮಾಹಿತಿಗೆ 1 ರೂ. ಹಣ ಇಲ್ಲವೆಂಬ ಮಾಹಿತಿ ಬಂದಿತ್ತು. ಸಪ್ಲಿಮೆಂಟ್ ಬಜೆಟ್ ಮಂಡಿಸುವ ವೇಳೆ 1494 ಕೋಟಿ ಹಣ ಉಳಿಕೆಯಾಗಿದೆ. ಹಣ ಸಂಚಿತ ನಿಧಿಗೆ ಹೋಗಬೇಕು. ಈ ಹಣ ಬಳಕೆಗೆ ಎಂಎಲ್ ಸಿ ಗಳ ಸಹಿ ಪಡೆಯಬೇಕು. ಕಾನೂನು ಪ್ರಕಾರವಾಗಿ ಹೆಡ್ ಆಫ್ ಅಕೌಂಟ್ ನಲ್ಲಿ ಜಮಾ ಅಗ್ತಾ ಇದೆ ಎಂದು ಆರಂಭದಲ್ಲಿ ಮಾಹಿತಿ ನೀಡಲಾಗಿತ್ತು. 


ಈ ಹಣ‌ ಟ್ರಜರಿಗೆ ಹೋಗಬೇಕು. ಟ್ರಜರಿಗೆ ಮಾಹಿತಿ ಕೇಳಿದರೆ ಬಂದಿಲ್ಲ ಎಂದು ಮಾಹಿತಿ ಬರುತ್ತೆ. ಜಮಾ ಮಾಡಲಾಗುತ್ತಿದೆ ಎಂಬ ಸಿಎಂ ಸಹಿ ಉಳ್ಳ ಪತ್ರ ಬರುತ್ತದೆ.  ಕಾಲಿಂಗ್ ಆಫ್ ಅಟೆನಷನ್ ಆದ ಮೇಲೆ ಜಮಾ ಮಾಡಲಾಗುವುದು ಎಂಬ ಮಾಹಿತಿ ನೀಡಲಾಗಿದೆ. 


ಶಾಸಕರ ಹಕ್ಕನ್ನ ಚ್ಯುತಿ ಮಾಡಲಾಗಿದೆ.  ಅಸಂವಿಧಾನಿಕ ಆರ್ಥಿಕ ವ್ಯವಸ್ಥೆ ಅನುಸಾರ, ಹಣ ಎಲ್ಲಿ ಜಮಾ ಆಗುತ್ತೆ? ಎಸ್ಬಿಐ ನಿಂದ ಬಂದ ಕಡತ ಸಂಖ್ಯೆಯನ್ನೇ ಇಲ್ಲದಂತೆ ಮಾಡಿದ್ದಾರೆ. ಜನರ ದುಡ್ಡು ಫೈನಾನ್ಷಿಯಲ್ ದುಡ್ಡು ಎಲ್ಲಿಗೆ ಹೋಗಿದೆ ಎಂಬ ಮಾಹಿತಿ ಕೇಳಲಾಗಿದೆ.  ಸಿದ್ದರಾಮಯ್ಯನವರು 1953 ಕೋಟಿ ಹಣ ಸೂಕ್ತ ತನಿಖೆ ಮಾಡಿ ಎಂದು ಅರುಣ್ ಆಗ್ರಹಿಸಿದರು.  ಇಲ್ಲವಾದಲ್ಲಿ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. 


ಈ ಬಗ್ಗೆವಲೋಕಾಯುಕ್ತರಿಗೆ ದೂರು ಕೊಡಲು ಬರೊಲ್ಲ. ಹಣ ದುರ್ಬಳಕೆ  ಆದರೆ ಲೊಕಾಯುಕ್ತರಿಗೆ ಬರುತ್ತೆ. ನಾನು ಆರ್ಥಿಕ ಆಶಿಸ್ತಿನ‌ ಬಗ್ಗೆ ದೂರು ನೀಡಿದ್ದೇನೆ. ಹಣ ಎಲ್ಲಿಗೆ ಹೋಗಿದೆ ಎಂದು ತಿಳಿಸುವಂತೆ ಒತ್ತಾಯಿಸಿರುವೆ ಎಂದರು. 


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಚಂದ್ರಶೇಖರ್, ಅಣ್ಣಪ್ಪ ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close