ಶುಕ್ರವಾರ, ಆಗಸ್ಟ್ 23, 2024

ಇಂದಿನಿಂದ ಮೂರುದಿನ ರಾಯಲ್ ಆರ್ಕಿಡ್ ನಲ್ಲಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ



ಸುದ್ದಿಲೈವ್/ಶಿವಮೊಗ್ಗ


ಬೆಂಗಳೂರಿನ ಹೆಸರಾಂತ ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಆಭರಣಗಳ ಕಂಪನಿಯು ಇಂದಿನಿಂದ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ನಗರದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ನಕಲಿ ಯುಗ. ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಆದರೆ, ಕೃಷ್ಣಯ್ಯ ಚೆಟ್ಟಿ ಕಂಪನಿಯು ನಂಬಿಕೆಗೆ ಅರ್ಹವಾಗಿದೆ. ಸುಮಾರು ೧೫೫ ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ರಾಜರ ಕಾಲದಿಂದ ಇವರ ಪೂರ್ವಜರು ಆಭರಣಗಳ ತಯಾರಿಕೆಯಲ್ಲಿ ಇದ್ದರು. ಶಿವಮೊಗ್ಗದ ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.


ಕಂಪನಿಯ ವ್ಯವಸ್ಥಾಪಕ ಶ್ರೀ ಚರಣ್ ಮಾತನಾಡಿ, ೧೮೬೯ರಿಂದ ನಮ್ಮ ಸಂಸ್ಥೆ ಜನರ ನಂಬಿಕೆಗೆ ಅನುಗುಣವಾಗಿ ಆಭರಣಗಳ ಮಾರಾಟ ಮಾಡುತ್ತಾ ಬಂದಿದೆ. ಶಿವಮೊಗ್ಗದ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಇದೆ. ಬಂಗಾರಕ್ಕೆ ಶೇ. ೪, ವಜ್ರಕ್ಕೆ ಶೇ. ೬, ಬೆಳ್ಳಿಗೆ ಶೇ. ೨ರಷ್ಟು, ೧೯ ಲಕ್ಷ ರೂ.ಗಿಂತ ಹೆಚ್ಚಿನ ವಜ್ರದ ಆಭರಣಗಳ ವ್ಯಾಪಾರ ಮಾಡಿದರೆ ಶೇ. ೯ ರಷ್ಟು ರಿಯಾಯಿತಿ ಇದೆ ಎಂದರು.


ಆ. ೨೩ರಿಂದ ೨೫ರವರೆಗೆ ಬೆಳಗ್ಗೆ ೧೦.೩೦ರಿಂದ ರಾತ್ರಿ ೮ ಗಂಟೆವರೆಗೆ ನಡೆಯುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿಶೇಷ ವಿನ್ಯಾಸದ ಆಭರಣಗಳು ಕಂಡು ಬಂದವು. ತೋಳಬಂಧಿ, ಸೊಂಟದ ಪಟ್ಟಿ, ನೆಕ್ಲೇಸ್, ಉಂಗುರಗಳು, ಬಳೆ, ಓಲೆ, ಮೂಗುತಿ, ಜುಮುಕಿ, ಪ್ಲಾಟಿನಂ ಆಭರಣಗಳು, ಲಕ್ಷ್ಮೀ ವೆಂಕಟೇಶ, ರುದ್ರಾಕ್ಷಿ ಮಣಿ ಸೇರಿದಂತೆ ವಿವಿಧ ವಿನ್ಯಾಸದ ಡಾಲರ್ ಗಳು, ಪ್ರೇಮಿಗಳಿಗಾಗಿ ಪ್ರೀತಿ ಸಂಕೇತದ ಡಾಲರ್ ಗಳು ಕಂಡು ಬಂದವು. ೫ ಸಾವಿರ ರೂ.ನಿಂದ ೫೦ ಲಕ್ಷ ರೂ.ಗೂ ಅಧಿಕ ಮೌಲ್ಯದ ಆಭರಣಗಳು, ಇದರ ಜೊತೆಗೆ ಸುಗಂಧ ದ್ರವ್ಯಗಳು, ಮುತ್ತು, ರತ್ನ, ನೀಲ ಮಾಣಿಕ್ಯ, ವೈಢೂರ್ಯ ಇಲ್ಲಿವೆ.


ಕಾರ್ಯಕ್ರಮದಲ್ಲಿ ಕಂಪನಿಯ ವ್ಯಸವ್ಥಾಪಕ ನಿರ್ದೇಶಕಿ ತ್ರಿವೇಣಿ ವಿನೋದ್, ಶ್ರೇಯಸ್, ಗೋಪಾಲ್, ಗಣೇಶ್ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ