ಇನ್ ಸ್ಪೆಕ್ಟರ್ ದೀಪಕ್ |
ಸುದ್ದಿಲೈವ್/ಶಿವಮೊಗ್ಗ
2021 ರಲ್ಲಿ ನಡೆದ ಇರ್ಫಾನ್ ಅಲಿಯಾಸ್ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣದ 8 ಆರೋಪಿಗಳಿಗೆ ಶಿವಮೊಗ್ಗ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದೆ.
ಗಾಂಜಾ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಇರ್ಪಾನ್ ಅಲಿಯಾಸ್ ಟ್ವಿಸ್ಟ್ ಇರ್ಫಾನ್ ನನ್ನು ಕೊಲೆ ಮಾಡಿದ ಎಂಟು ಆರೋಪಿಗಳಿಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಪಲ್ಲವಿಯವರು ಎಂಟು ಆರೋಪಿಗಳಿಗೆ 14 ವರ್ಷ ಜೀವಾವಧಿ ಶಿಕ್ಷೆ ಪ್ರತಿ ಆಪರಾಧಿಗಳಿಗೂ ತಲಾ ಐದು ಸಾವಿರ ದಂಢ ವಿಧಸಿ ತೀರ್ಪು ನೀಡಿದ್ದಾರೆ.
ಇರ್ಫಾನ್ ಕೊಲೆ ಆರೋಪಿಗಳು |
ಪ್ರಕರಣದ ಐದನೇ ಆರೋಪಿ ಸೈಯದ್ ರಾಜಿಕ್ ವರ್ಷದ ಹಿಂದೆ ಭದ್ರವತಿಯಲ್ಲಿ ಕೊಲೆಯಾಗಿದ್ದಾನೆ. ಏಳು ಆರೋಪಿಗಳು ಜೈಲು ಶಿಕ್ಷೆ ಅನುಭವಿಸಬೇಕಾಗಿತೆ. ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸರ್ಕಾರಿ ಅಭಿಯೋಜಕರಾದ ಪುಷ್ಪ ರವರು ವಾದ ಮಂಡಿಸಿದ್ದರು. ವಾದ ಮಂಡಿಸಿದವರು ಹಾಗು ತೀರ್ಪು ನೀಡಿದವರು ಮಹಿಳೆಯರೇ ಆಗಿರುವುದು ಇಲ್ಲಿ ವಿಶೇಷ.
ಘಟನೆ ಹಿನ್ನಲೆ
ಪ್ರಕರಣದ ಎಂಟು ಆರೋಪಿಗಳಲ್ಳಿ ಓರ್ವ ಈ ಹಿಂದೆ ಭದ್ರಾವತಿಯಲ್ಲಿ ಕೊಲೆಯಾಗಿದ್ದ. ದಿನಾಂಕ 18-09-21 ರಂದು ಇರ್ಫಾನ್ ತನ್ನ ಸ್ನೇಹಿತ ಆಸಾಧ್ ಮತ್ತು ವಾಷರ್ ಜೊತೆ ಸಂಜೆ ಬೈಕ್ ನಲ್ಲಿ ಬರುತ್ತಿದ್ದಾಗ ಟಿಪ್ಪು ನಗರ ಏಳನೇ ಮುಖ್ಯ. ರಸ್ತೆಯ ನಾಲ್ಕನೇ ಕ್ರಾಸ್ ನಲ್ಲಿ ಇರ್ಪಾನ್ ಗೆ ಲತೀಫ್ ಮತ್ತವನ ಸಹಚರರ ತಂಡ ಎದುರಾಗಿದೆ. ಗಾಂಜಾ ವಿಚಾರದಲ್ಲಿ ಕ್ಯಾತೆ ತೆಗೆದ ಲತೀಪ್, ಪರ್ವೇಜ್, ಸೈಯ್ಯದ್ ಜಿಲಾನ್ ಜಾಫರ್ ಸಾಧಿಕ್, ಸೈಯ್ಯದ್ ರಾಜಾಕ್, ಮೊಹಮ್ಮದ್ ಶಾಲಾಜ್, ಸಾಜಿರ್ ಮತ್ತು ಮೊಹ್ಹಮ್ಮದ್ ಯುಸುಫ್ ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ಎದೆಗೆ ಚುಚ್ಚಿ ಕೊಲೆ ಮಾಡಿದ್ದರು.
ರಕ್ತದ ಮಡುವಿನಲ್ಲಿದ್ದ ಇರ್ಪಾನ್ ನನ್ನು ಸ್ನೇಹಿತ ಅಸಾದ್ ಮತ್ತು ವಾಷರ್ ಅಂಬುಲೆನ್ಸ್ ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇರ್ಪಾನ್ ಕೊನೆಯುಸಿರುಳೆದಿದ್ದನು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿ ಇನ್ ಸ್ಪೆಕ್ಟರ್ ದೀಪಕ್ ಕೊಲೆ ಆರೋಪಿಗಳು ಎಲ್ಲು ಮಿಲುಕಾಡದಂತೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳಿಗೆ ಯಾವ ಹಂತದಲ್ಲೂ ಜಾಮೀನು ಸಿಗದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಆರೋಪಿಗಳಿಗೆ ಜಾಮೀನು ಸಿಗದಂತೆ ನ್ಯಾಯಾಲಯಕ್ಕೆ ಮನವರಿಕೆ ಇನ್ ಸ್ಪೆಕ್ಟರ್ ದೀಪಕ್ ಮನವರಿಕೆ ಮಾಡಿದ್ದರು.
1.ಆರೋಪಿಗಳಿಗೆ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ
2.ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಹಾಗು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಗಳು ಹೆಚ್ಚಿದೆ.
3.ಅಲ್ಲದೆ ಜಾಮೀನು ನೀಡಿದರೆ ಮೃತನ ಕುಟುಂಬದ ಕಡೆಯವರು ಹಾಗು ಇವರ ನಡುವೆ ಗಲಾಟೆಗಳಾಗಿ ಆಸ್ತಿ ಜೀವ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.
4.ಲತೀಫ್,ಪರ್ವೆಜ್ ಹಾಗು ಸೈಯದ್ ರಾಝಿಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಲಂ 504, 307, 34 ಐಪಿಸಿ ಆರೋಪಿತರಾಗಿದ್ದು ಜಾಮೀನಿನ ಮೇಲಿದ್ದರೂ, ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿರುತ್ತಾರೆ.
5.ರಾಝಿಕ್ ಮತ್ತು ಮಹಮ್ಮದ್ ಯುಸುಫ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಕೊಲೆಯತ್ನದಂತ ಕೇಸುಗಳಿವೆ ಎಂದು ಇನ ಸ್ಪೆಕ್ಟರ್ ದೀಪಕ್ ಘನ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇಂದು ನ್ಯಾಯಾಲಯ ನೀಡಿರುವ ತೀರ್ಪು ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಕೊಲೆ ಆರೋಪಿತರ ನಿದ್ದೆಗೆಡಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ