ಸುದ್ದಿಲೈವ್/ಶಿವಮೊಗ್ಗ
ಅನುಪಿನ ಕಡಿಯಿಂದ ಪುರುದಾಳಿವಿಗೆ ತೆರಳುವಾಗ ಸ್ಕೂಟಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಗೆ ಎರಡು ಕಾಲು ಮುರಿದಿರುವ ಘಟನೆ ಸಂಜೆ 4 ಗಂಟೆಯ ವೇಳೆಗೆ ನಡೆದಿದೆ.
ಸ್ಕೂಟಿ ಪಾಸ್ ಆಗುವಾಗ ಕಾರೊಂದು ಅಡ್ಡಬಂದು ಡಿಕ್ಕಿ ಹೊಡೆಸಿದೆ. ಭಾಗೀರಥಿ ಎಂಬ ಮಹಿಳೆಗೆ ಕಾಲು ಮುರಿದಿದೆ. ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ರಸ್ತೆ ಅಪಘಾತ ಪಡಿಸಿದ ಕಾರಿನ ಚಾಲಕ ಅಪಘಾತ ಪಡಿಸಿದ ಮಹಿಳೆಗೆ ಮೆಗ್ಗಾನ್ ಗೆ ದಾಖಲಿಸಿ ಪರಾರಿಯಾಗಿರುವುದಾಗಿ ಕುಟುಂಬ ಆರೋಪಿಸಿದೆ.
ಶಿವಮೊಗ್ಗದಲ್ಲಿ ಕೆಲಸ ಮುಗಿಸಿಕೊಂಡು ಪುರುದಾಳುವಿಗೆ ಹೋಗುತ್ತಿದ್ದ ಮಹಿಳೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅನುಪಿನಕಟ್ಟೆಯಲ್ಲಿ ಕಾರೊಂದು ಅಡ್ಡ ಬಂದಿದೆ. ಕಾರು ಚಾಲಕ ಗೋಪಾಲದ ವರೆಗೆ ಮಹಿಳೆಯನ್ನ ಕರೆದುಕೊಂಡು ಬಂದು ನಂತರ ಆಟೋ ಹತ್ತಿಸಿ ಕಳುಹಿಸಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ