ಸುದ್ದಿಲೈವ್/ಶಿವಮೊಗ್ಗ
ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಸರ್ಕಾರಗಳು ಅನೇಕ ಸೌಲಭ್ಯ. ಸವಲತ್ತುಗಳನ್ನು ಆಯಾ ಕಾಲೇಜಿಗೆ ನೀಡುತ್ತವೆ..ಆದರೆ ಶಿವಮೊಗ್ಗದ ಪ್ರತಿಷ್ಠಿತ ಎನಿಸಿಕೊಳ್ಳುವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಾಲೇಜು ಎಂಬ ಹೆಗ್ಗಳಿಕೆ ಪಡೆದುಕೊಂಡ ಈ ಕಾಲೇಜು ಡೂನೇಷನ್ ಹಾವಳಿ ನಡೆಸುತ್ತಾ ಉನ್ನತ ಶಿಕ್ಷಣ ವನ್ನು ಮಾರಾಟಕ್ಕಿಟ್ಟಿದೆ.
ಅದರಲ್ಲೂ ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯ ಬಡ.ದಲಿತ.ಶೋಷಿತರ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಆರಂಭಿಸಿದ ಕಾಲೇಜು ಇಂದು ಹಣ ಪಿಪಾಸುಗಳ.ಡೂನೇಷನ್ ಮಾಫಿಯಾಗಳ ಹಿಡಿತದಲ್ಲಿ ಇರುವುದು ಶೋಚನೀಯ.!? ಇತ್ತೀಚಿಗೆ ಒಬ್ಬ ದಲಿತ ಸಮುದಾಯದ ಬಾಲಕಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ.ಆಕೆಯ ತಾಯಿಗೆ ಕಿಡ್ನಿ ತೊಂದರೆಯಾಗಿ ಚಿಕಿತ್ಸೆ ಗಾಗಿ ಲಕ್ಷಗಟ್ಟಲೆ ಹಣ ಖರ್ಚಾಗಿದ್ದು.
ಪ್ರಸ್ತುತ ವರ್ಷದ ಶಾಲಾ ಶುಲ್ಕವನ್ಮು ವಿಳಂಬವಾಗಿ ಪಾವತಿಸಲು ಆಕೆಯ ಪೋಷಕರು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು.ನಿಗದಿತ ಸಮಯದಲ್ಲಿ ಪಾವತಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶುಲ್ಕ ಪಾವತಿಸಲು ವಾಯಿದೆ ಕೊಡಿಸಿ ಪರೀಕ್ಷೆ ಬರೆಯಲು ಅನುಮತಿ ಕೊಡಿಸಲು ಮನವಿ ಮಾಡಿಕೊಂಡ ಅರ್ಜಿಗೆ ಸಚಿವರು ಕ್ರಮವಹಿಸಲು ಸೂಚಿಸಿದ್ದರು.ಆದರೆ ಆ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಆಡಳಿತ ಮಂಡಳಿ ದಲಿತ ಬಾಲಕಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನೀಡದೆ ಮೌಖಿಕವಾಗಿ ಸೂಚಿಸಿದೆಯಂತೆ.
ಅಂದರೆ ಒಬ್ಬ ದಲಿತ ವಿದ್ಯಾರ್ಥಿನಿಯ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾಲೇಜಿನ ಆಡಳಿತ ಮಂಡಳಿಯ ವಿರುದ್ದ ಹಾಗು ಸಂಬಂಧಿಸಿದದವ ವಿರುದ್ದ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಲು ಸಜ್ಜಾಗುತ್ತಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ