ಸೋಮವಾರ, ಆಗಸ್ಟ್ 26, 2024

ನಗರದಲ್ಲಿ ನಡೆದ ಕೃಷ್ಣಾಷ್ಠಮಿ


 


ಸುದ್ದಿಲೈವ್/ಶಿವಮೊಗ್ಗ


ಕೃಷ್ಣಾಷ್ಠಮಿ ಪ್ರಯುಕ್ತ ನಗರದಲ್ಲಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಸಂಭ್ರಮಿಸಲಾಗಿದೆ. ಮಕ್ಕಳಿಗೆ ಕೃಷ್ಣನ ವೇಷ ಹಾಕುವ ಮೂಲಕ ಅಷ್ಠಮಿಗೆ ಕಳೆ ತುಂಬಲಾಗಿದೆ.


ನಗರದ ರವೀಂದ್ರ ನಗರದ ಸ್ವಾಮಿ ವಿವೇಕಾನಂದ ಇಂಟರ್ನಾಷನಲ್  ಶಾಲೆಯಲ್ಲಿ ಕೃಷ್ಣಾಷ್ಠಮಿಗಾಗಿ ಮಕ್ಕಳಿಗೆ ವೇಷ ಹಾಕಲಾಯಿತು. ಹೆಣ್ಣು ಮಕ್ಕಳು ರಾಧೆಯ ವೇಷದಲ್ಲಿ ಬಂದರೆ ಗಂಡು ಮಕ್ಕಳು ಕೃಷ್ಣನ ವೇಷದಲ್ಲಿ ಬಂದಿದ್ದು ವಿಶೇಷವಾಗಿತ್ತು.



ಬಾಲ ಕೃಷ್ಣನ ಹಾವ ಭಾವ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಾಗಿತ್ತು.  ರೋಹಿಣಿ ನಕ್ಷತ್ರ ಇಂದು ರಾತ್ರಿ 8 ಗಂಟೆಗೆ ಬಂದಿದೆ. ಶಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ ದಿನ ಕೃಷ್ಣ ಜನ್ಮಿಸಿದ್ದನು. ಕೃಷ್ಣನ ಪ್ರತಿಯೊಂದು ಘಟನೆಯೂ ಐತಿಹಾಸಿಕವಾಗಿದೆ.


ಉಡುಪಿಯಲ್ಲಿ ನಾಳೆ ವಿಟ್ಲಪಿಂಡಿ ನಡೆಯಲಿದೆ. ನಾಳೆ ಮಣ್ಣಿನಿಂದ ಬಾಲಕೃಷ್ಣನನ್ನ ನಿರ್ಮಿಸಿ ರಥಯಾತ್ರೆ ನಡೆಸಿ ನಂತರ ಮಧ್ವ ಸರೋವರದಲ್ಲಿ ಬಿಡಲಾಗುತ್ತದೆ. ರಥೋತ್ಸವ ಹೋಗುವ ವೇಳೆ, ಹುಲಿವೇಷ, ವಿಟ್ಲಪಿಂಡಿ (ಮೊಸರಿನ ಕುಡಿಕೆ ಒಡೆಯುವುದು) ಮಿದಲಾದ ಕಾರ್ಯಕ್ರಮಗಳು ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ