ಬುಧವಾರ, ಆಗಸ್ಟ್ 7, 2024

ಕೆರೆಯಲ್ಲಿ ಅಂಗವಿಕಲನ ಶವಪತ್ತೆ



ಸುದ್ದಿಲೈವ್ /ಶಿವಮೊಗ್ಗ


ದೊಡ್ಡದಾವನಂದಿ ಗ್ರಾಮದ 29 ವರ್ಷದ ಅಂಗವಿಕಲ ಯುವಕನೋರ್ವನ ಶವವೊಂದು ಪತ್ತೆಯಾಗಿದ್ದು ಅತನನ್ನ ನಿತಿನ್ ಎಂದು ಗುರುತಿಸಲಾಗಿದೆ. 


ಅಂಗವಿಕಲನಾಗಿದ್ದ ನಿತಿನ್ ತುದಿಗಾಲಿನಲ್ಲಿ ನಡೆಯುತ್ತಿದ್ದ ಯುವಕ ದೊಡ್ಡದಾವನಂದಿ ಗ್ರಾಮದ ಬಸ್ ನಿಲ್ದಾಣದಲ್ಲಿ ಚಹದಂಗಡಿ ಇಟ್ಟುಕೊಂಡು ನಿತಿನ್ ಜೀವನ‌ನಡೆಸುತ್ತಿದ್ದನು. ಇವರ ತಾಯಿ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು. 


ಆದರೆ ಆ.06 ರಂದು ದೊಡ್ಡದಾವನಂದಿ ಗ್ರಾಮದಲ್ಲಿನ ಕೆರೆಯಲ್ಲಿ ಅಂಗಾತ ಬಿದ್ದು ಎರಡು ಕಾಲುಗಳು ಕೆರೆಯಹೊರಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದನು. ಈ ಘಟನೆ ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 


ನಿತಿನ್ ಮತ್ತು ಅವರ ತಾಯಿ ಇಬ್ಬರೇ ಇದ್ದು ಕೆರೆಯಲ್ಲಿ ಆಯತಪ್ಪಿ ಅಥವಾ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬೆಳಿಗ್ಗೆ ಅಂಗಡಿಯಲ್ಲಿ ವ್ಯಾಪಾರವಮಾಡಿಕೊಂಡಿದ್ದ ನಿತಿನ್ ಸಂಜೆ ಅಂಗಡಿ ಕಡೆ ಬಂದ ತಾಯಿಗೆ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿ ಆಕೆಗೆ ಮನೆಗೆ ತೆರಳಲು ಸೂಚಿಸಿದ್ದನು. 


ಆದರೆ ಮನೆಗೆ ಎಷ್ಟು ಹೊತ್ತು ಕಳೆದರೂ  ಮನೆಗೆ ಬಾರದ ನಿತಿನ್ ನನ್ನ ಹುಡುಕಿಕೊಂಡು ಹೋದಾಗ ಗ್ರಾಮದ ಮಲ್ಲೇಶಪ್ಪನವರು ಈ ವಿಷಯ ತಿಳಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ