Girl in a jacket

ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ಇನ್ನಿಲ್ಲ!



ಸುದ್ದಿಲೈವ್/ಶಿವಮೊಗ್ಗ


ಸಾಗರದ ಮಾಜಿ ಶಾಸಕ ಕೆ.ಹೆಚ್.ಶ್ರೀನಿವಾಸ್ ನಿಧನರಾಗಿದ್ದಾರೆ. ಕೆ.ಹೆಚ್.ಶ್ರೀನಿವಾಸ್ ಸಾಗರದಲ್ಲಿ 1967-1971 ರಲ್ಲಿ ಶಾಸಕರಾಗಿ, ಶಿವಮೊಗ್ಗದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದರು. 


ಬೆಂಗಳೂರಿನ ಸದಾಶಿವ ನಗರದಲ್ಲಿರುವ ಮನೆಯಲ್ಲೇ ಅಸು ನೀಗಿದ್ದ ಕೆ.ಹೆಚ್ ಶ್ರೀನಿವಾಸ್ ಅವರಿಗೆ  85  ವರ್ಷವಾಗಿತ್ತು. ಅವರ ಅಂತ್ಯ ಕ್ರಿಯೆಯನ್ನೂ ಬೆಂಗಳೂರಿನಲ್ಲಿ ನಡೆಯಲಿದೆ. ಸಾಗರದಲ್ಲಿ ಕಾಗೋಡು ವಿರುದ್ದ ಗೆದ್ದಿದ್ದರೆ ಶಿವಮೊಗ್ಗದಲ್ಲಿ ಜನಸಂಘದ ಆನಂದ್ ರಾವ್ ಅವರ ವಿರುದ್ಧ ಗೆದ್ದು ಇಂಧನ ಸಚಿವರಾಗಿದ್ದರು. 


ಎಲ್. ಬಿ. ಕಾಲೇಜಿನ ಫೌಂಡರ್ ಪ್ರೆಸಿಡೆಂಟ್ ಆಗಿದ್ದರು. 2021 ರಲ್ಲಿ ಬಿಟ್ಟುಕೊಟ್ಟಿದ್ದರು. ಕನ್ನಡ ಇಂಗ್ಲೀಷ್ ನ ಭಾಷೆಯಲ್ಲಿ ಪರಿಣಿತಿಹೊಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close