ಸುದ್ದಿಲೈವ್/ಶಿವಮೊಗ್ಗ
ಸೂಡಾ ಕಚೇರಿ ಮುಂದೆ ಸೂಡಾ ಶೆಡ್ ತೆರವುಗೊಳಿಸಿ ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆ ನಡೆಸುತ್ತಿದ್ದ ಪ್ರತಿಭಟನೆ ಇಂದಿಗೆ ನಿಲ್ಲಿಸಿದೆ. ನಿನ್ನೆ ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ವೇದಿಕೆಯ ವಸಂತ್ ಕುಮರ್ ವಾಟ್ಸಪ್ ಮೆಸೇಜ್ ವೊಂದನ್ನ ಹಾಕಿದ್ದು ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಸೂಡಾ ಆಯುಕ್ತರೊಂದಿಗೆ ಬೆಳಿಗ್ಗೆ ಮಾತನಾಡಿಸಲಾಯಿತು. ಮಾಸ್ಟರ್ ಪ್ಲಾನ್ ನಲ್ಲಿ ತಪ್ಪಾಗಿದೆ. ಆದರೆ ಈ ಸೂಡಾ ಜಾಗದಲ್ಲಿ ದ್ವಿಚಕ್ರ ವಾಹನ ಓಡಾಡಲು ಅವಕಾಶ ನೀಡಲಾಗಿದೆ.
ನಮ್ಮ ದಾಖಲಾತಿ ಪ್ರಕಾರ ಅದು ನಮ್ಮ ಜಾಗನೇ. ಮಾಸ್ಟರ್ ಪ್ಲಾನ್ ನಲ್ಲಿ ತಪ್ಪಾಗಿದೆ. ಅದಕ್ಕಾಗಿ ನಿನ್ನೆ ಪಾಲಿಕೆ ಮತ್ತು ಸೂಡ ಅಧಿಕಾರಿಗಳಿಂದ ಜಂಟಿ ಸರ್ವೆ ನಡೆಸಲಾಗಿದೆ. ಪಾಲಿಕೆ ಜಾಗವೆಂದು ವರದಿ ಬಂದರೆ ಜಾಗ ಬಿಟ್ಟುಕೊಡುತ್ತೇವೆ. ಆದರೆ ನಾನು ಒಬ್ಬನೇ ಇಲ್ಲ. ಸೂಡಾ ಅಧ್ಯಕ್ಷರೂ ಇದ್ದಾರೆ. ಅವರ ನಿರ್ಣಯಕ್ಕೆ ಬಿಡಲಾಗಿದೆ ಎಂದರು.
ಇದರಿಂದ ಇತ್ಯಾರ್ಥ್ಯ ಬಗೆಹರಿಯಿತು ಎನ್ನುವುದಕ್ಕಿಂತ ಸೂಡ ಅಧ್ಯಕ್ಷರ ಅಂಗಳಕ್ಕೆ ಈ ಪ್ರಕರಣ ಬಿದ್ದಿದೆ. ಜಂಟಿ ಸರ್ವೆ ಏನೇ ಬಂದರೂ ಸೂಡಾ ಅಧ್ಯಕ್ಷರ ಅಂಗಳಕ್ಕೆ ಹೋಗುವುದರಿಂದ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ