ಶುಕ್ರವಾರ, ಆಗಸ್ಟ್ 9, 2024

ರೌಡಿ ಪೆರೇಡ್



ಸುದ್ದಿಲೈವ್/ಶಿವಮೊಗ್ಗ


ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ರೌಡಿ ಪರೇಡ್ ನಡೆಸಲಾಗಿದೆ. ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಡಿಎಆರ್ ಸಭಾಂಗಣದಲ್ಲಿ ಪೆರೇಡ್ ನಡೆಸಲಾಗಿದೆ. 


ಶಿವಮೊಗ್ಗ ಉಪವಿಭಾಗ 1&2 ರ ವಿವಿಧ ಠಾಣೆಗಳ ಒಳಗೊಂಡ ರೌಡಿ ಪರೇಡ್ ಗಳನ್ನ ಕರೆಸಲಾಗಿತ್ತು. ನೂರಕ್ಕೂ ಹೆಚ್ಚು ರೌಡಿ ಆಸಾಮಿಗಳು ಪರೇಡ್ ನಲ್ಲಿ ಭಾಗಿಯಾಗಿದ್ದರು. 


ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ರೌಡಿಗಳನ್ನು ಕರೆಸಿ ಎಚ್ಚರಿಕೆಗಳನ್ನ  ಅಧಿಕಾರಿಗಳು‌ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಪ್ರತಿ ಒಬ್ಬ ರೌಡಿ ಆಸಾಮಿಯ ಚಲನವಲನದ ಮಾಹಿತಿಯನ್ನ ಪೊಲೀಸ್ ಅಧಿಕಾರಿಗಳು ಪಡೆದಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ