ಸುದ್ದಿಲೈವ್/ಶಿವಮೊಗ್ಗ
ಬ್ಯಾಂಕ್ ನ ಖಾತೆಯ ನಂಬರಗೂ ಮೊಬೈಲ್ ನ ಸಂಖ್ಯೆಗೆ ಜೋಡಣೆಯಾಗಿರುವುದರಿಂದ ಯಾವುದಾದರೂ ಲಿಂಕ್ ಕ್ಲಿಕ್ ಮಾಡಿದರೆ ಹಣಕಳೆದುಕೊಳ್ಳುವ ಭಯ ಸಾಮಾನ್ಯವಾಗಿರುತ್ತದೆ.
ಆದರೆ ಇಲ್ಲೊಂದು ಘಟನೆಯಲ್ಲಿ ಬಿಎಸ್ ಎನ್ ಎಲ್ ನ ನಿವೃತ್ತ ಸಿಬ್ಬಂದಿ ಯಾವ ಲಿಂಕು ಕ್ಲಿಕ್ ಮಾಡಿಲ್ಲ, ಯಾವ ಬೇಡದ ಆಪ್ ನೂ ಡೌನ್ ಲೋಡ್ ಮಾಡಿಕೊಳ್ಳದೆ 2,41,000/- ರೂ ಹಣ ಕಳೆದುಕೊಂಡ ಘಟನೆ ನಡೆದಿದೆ.
ಎರಡು ಬ್ಯಾಂಕಿನ ಖಾತೆಯನ್ನ ಹೊಂದಿರುವ ಹರಿ ಪಟ್ನಾಯಕ್ ಎಂಬುವರಿಗೆ ಆ.16 ರಂದು ವಿನೋಬ ನಗರದ ಬ್ಯಾಂಕ್ ಖಾತೆಯಿಂದ 5 ರಿಂದ 7 ಗಂಟೆಯ ವರೆಗೆ ಎರಡು ಲಕ್ಷದ ಎರಡು ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ.
ನಂತರ ಇನ್ನೋಂದು ಬ್ಯಾಂಕ್ ನಿಂದ 39 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಯಾವ ಲಿಂಕಗಳನ್ನ ಆಪ್ ಗಳನ್ನ ಡೌನ್ ಮಾಡಿಕೊಂಡ ಪರಿಣಾಮ ಹಣಕಳೆದುಕೊಂಡಿರುವ ಬಗ್ಗೆ ಎಲ್ಲೂ ಎಫ್ಐಆರ್ ನಲ್ಲಿ ಉಲ್ಲೇಖವಾಗದ ಕಾರಣ ಈ ಪ್ರಕರಣ ಅಚ್ಚರಿ ಮೂಡಿಸಿದೆ.
ಸುಮ್ ಸುಮ್ನೆ ಹಣ ಕಳೆದುಕೊಂಡಿರುವುದು ಅಚ್ಚರಿ ಮೂಡಿಸಿರುವುದರಿಂದ ಈ ಪ್ರಕರಣ ಡಿಜಿಟಲೈಜೇಷನ್ ಸೇಫ್ ಅಲ್ಲ ಎಂಬುದನ್ನ ಹೇಳುತ್ತಿದೆ ಎನಿಸುತ್ತಿದೆ. ಈ ಬಗ್ಗೆ ಹರಿ ಪಟ್ನಾಯಕ್ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ