ಸುದ್ದಿಲೈವ್/ಶಿವಮೊಗ್ಗ
ಪೌಡರ್ ಗ್ಯಾಂಗ್ ನಿಂದ ರಾಬರಿ ನಡೆದಿದೆ. ಇವರ ಪ್ರಕರಣಗಳು ದಾಖಲಾಗದೆ ಸುಮಾರು ತಿಂಗಳುಗಳೆ ಕಳೆದಿದೆ.
ಮನೆಯ ಬಾಂಡೆ ಸಾಮಾನುಗಳನ್ನ ತಿಕ್ಕಿ ಫಳಫಳ ಹೊಳೆಯುವಂತೆ ಮಾಡಿಕೊಡುವುದಾಗಿ ಗೃಹಿಣಿಯರನ್ನ ನಂಬಿಸಿ ಚಿನ್ನಾಭರಣಗಳನ್ನ ಕಳುವು ಮಾಡುತ್ತಿದ್ದ ಈ ಗ್ಯಾಂಗ್ ಈಗ ನೇರವಾಗಿ ಚಾಕು ತೋರಿಸಿ ಚಿನ್ನಾಭರಣಗಳನ್ನ ಕಿತ್ತುಕೊಂಡು ಹೋಗಿರುವ ಘಟನೆ ವಿನೋಬ ನಗರ ಪೊಲೀಸ್ ಠಾಣೆಯಲಗಳಲ್ಲಿ ದೂರು ದಾಖಲಾಗಿದೆ.
ವಿನೋಬನಗರದ ವೀರಣ್ಣ ಲೇಔಟ್ ನಲ್ಲಿ ಮಹಿಳೆಯೋರ್ವರು ಮನೆಯಲ್ಲಿದ್ದಾಗ ಮನೆಯ ಬಾಗಿಲು ಬಡೆದ ಇಬ್ಬರು ಅಪರಿಚಿತರು ನಾವು ನಿಮ್ಮಮನೆಯ ದೇವರುಗಳನ್ಬೇ ಫಳಫಳವನ್ನಾಗಿಸಿ ಕೊಡುವುದಾಗಿ ಹೇಳಿದ್ದಾರೆ.
ಮಹಿಳೆ ಬೇಡ ಎಂದಿದ್ದಾರೆ. ಅಷ್ಟರಲ್ಲಿ ಮತ್ತೋರ್ವ ಅಪರಿಚಿತ ಪೇಪರ್ ಅಗಲಿಸಿ ಪೌಡರ್ ಸುರಿದಿದ್ದಾನೆ. ಕುಕ್ಕರ್ ಕೊಡಿ ಜಗಮಗಿಸಿಕೊಡ್ತೀನಿ ಎಂದಿದ್ದಾನೆ. ಅದಕ್ಕೂ ಮಹಿಳೆ ನೋ ಎಂದಿದ್ದಾರೆ. ಎಲ್ಲದಕ್ಕೂ ಬೇಡ ಎನ್ನವ ಮಹಿಳೆಯಿಂದ ತಾಳ್ಮೆ ಕಳೆದುಕೊಂಡ ಮತ್ತೋರ್ವ ನೇವಾಗಿ ಚಾಕು ತೋರಿಸಿದ್ದಾನೆ.
ಕೈಯಲ್ಲಿರುವ 38 ಗ್ರಾಂ ಚಿನ್ನಾಭರಣವನ್ನ ತೆಗೆದುಕೊಡು ಎಂದಿದ್ದಾನೆ. ಮಹಿಳೆಯೂ ಸಹ ಪ್ರತಿರೋಧ ತೋರದೆ ಬಳೆ ತೆಗೆದುಕೊಟ್ಟಿದ್ದಾರೆ. ಮಹಿಳೆಗೆ ಇಬ್ವರು ಮಕ್ಕಳಿದ್ದು ಒಬ್ಬ ಬೆಂಗಳೂರಿನಲ್ಲಿ ಮತ್ತೋರ್ವ ಚಿತ್ರದುರ್ಗದಲ್ಲಿದ್ದಾನೆ. ಚಿತ್ರದುರ್ಗದಲ್ಲಿರುವ ಮಗ ಆಗಾಗ್ಗೆ ಶಿವಮೊಗ್ಗಕ್ಕೆ ಬಂದು ಹೋಗುತ್ತಾನೆ.
ಮಗನ ಜೊತೆ ಚರ್ಚಿಸಿ ನಂತರ ಮಹಿಳೆ ಶಿವಮೊಗ್ಗದ ವಿನೋಬ ನಗರ ಠಾಣೆಗೆದೂರು ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ