ಸುದ್ದಿಲೈವ್/ಶಿವಮೊಗ್ಗ
ಬಸವನಗುಡಿಯ ಪಿಡಬ್ಲೂಡಿ ಕ್ವಾಟ್ರಸ್ ನಲ್ಲಿರುವ ಒಟ್ಟು ಐದು ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು ಒಂದು ಮನೆಗಳಲ್ಲಿ ಕಳುವಿನ ಯತ್ನ ನಡೆದಿದೆ.
ಡಿಸಿ ಕಚೇರಿಯ ಡಿಸಿಪಿಎ ದೀಪಕ್, ಜಡ್ಜ ಚಾಲಕ ಪ್ರಕಾಶ್ ವಾರ್ತ ಇಲಾಖೆಯ ಭಾಗ್ಯ, ಡಿಸಿ ಕಚರಿಯಲ್ಲಿ ಎಸ್ ಡಿಎ ಸಂಧ್ಯ, ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಸ್ಟೆನೋ ನಂದಿನಿ ಸೇರಿದಂತೆ 5 ಮನೆ ಕಳುವು ಆಗಿದೆ. ಒಂದು ಮನೆ ಕಳುವಿನ ಯತ್ನ ನಡೆದಿದೆ.
ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಗದು ಕಳುವಾಗಿದೆ. ಪ್ರಿಂಗರ್ ಪ್ರಿಂಟ್ಸ್, ಡಾಗ್ ಸ್ಕ್ವಾಡ್, ಸ್ಥಳಕ್ಕೆ ಡಿಎಆರ್ ವಾಹನ ಸ್ಥಳಕ್ಕೆ ಧಾವಿಸಿದೆ. ಸುಮಾರು ಮೂರು ಗಂಟೆಯ ವೇಳೆಗೆ ಸರಣಿ ಕಳವು ನಡೆದಿದೆ.
ಎರಡು ಲಕ್ಷಕ್ಕೂ ಹೆಚ್ಚು ಕ್ಯಾಶು, ಮೂರು ಉಂಗುರ, ಬೆಳ್ಳಿ ಕಾಯಿನ್, 300 ಗ್ರಾಂ ಚಿನ್ನಾಭರಣ, ಕಳುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಾಗೂ ಕೆಲ ಕೆಲಸದ ಮೇಲೆ ಊರಿಗೆ ಹೋದಾಗ ಕಳ್ಳತನ ನಡೆದಿದೆ. ದೀಪಕ್ ಅವರು ಅತ್ತೆ ತೀರಿಕೊಂಡ ಪರಿಣಾಮ ಕೋಲಾರದ ಬಂಗಾರಪೇಟೆಗೆ ತೆರಳಿದ್ದರು. ಜಡ್ಜ್ ಪ್ರಕಾಶ್ ಅರಸೀಕೆರೆಗೆ ಹೋಗಿದ್ದರು.
ಅವರ ಮನೆಯಲ್ಲಿ ಒಂದು ಉಂಗುರ, ಎರಡು ಚೈನು ಹಾಗೂ 45 ಸಾವಿರ ನಗದು ಕಳುವಾಗಿದೆ. ಸಂಧ್ಯ ಅವರ ಮನೆಯಲ್ಲಿ 1.15 ಲಕ್ಷ ಕ್ಯಾಶ್ ಕಳುವಾಗಿದೆ. ಇಷ್ಟು ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಮತ್ತೊಂದಿಷ್ಟು ಮಾಹಿತಿಗಾಗಿ ಕಾಯಲಾಗುತ್ತಿದೆ. ವಾರ್ತ ಇಲಾಖೆ ಭಾಗ್ಯ ಅವರ ಮನೆಯಲ್ಲಿ ಕಳುವಿನ ಯತ್ನ ನಡೆದಿದೆ.
ಕ್ವಾಟ್ರಸ್ ನ ಎದಿರಿನ ಮನೆಯಲ್ಲಿ ಸಿಸಿ ಟಿವಿ ಫೂಟೇಜ್ ದೊರೆತಿದ್ದು ಮೂವರು ಮುಸುಕುಧಾರಿಯಾಗಿ ಬಂದು ಐದು ಮನೆಯನ್ನ ಇಂಟರ್ ಲಾಕರ್ ಹೊಡೆದು ಕಳುವು ಮಾಡಲಾಗಿ. ಕಳುವಾದ ಮನೆಗಳ ಬೀರುವಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿ ಅಗಿವೆ.