ಸುದ್ದಿಲೈವ್/ಶಿವಮೊಗ್ಗ
ಕಳೆದ ಎರಡು ಮೂರು ವರ್ಷಗಳಿಂದ ಶಿವಮೊಗ್ಗ ಕೋಮು ದ್ವೇಷದ ಕೋಮುವಾದಿ ಪ್ರಚೋದನೆಗೆ ಒಳಗಾಗಿ ಗಲಭೆಗಳು ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಹಬ್ಬಗಳು ಸೌಹಾರ್ದತೆ, ಪ್ರೀತಿ, ವಿಶ್ವಾಸದ ಸಂದೇಶ ಸಾರಬೇಕಾಗಿದೆ. ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಧರ್ಮಗಳ ಮಧ್ಯೆ ಸೌಹಾರ್ದತೆ ಪ್ರೀತಿ ವಿಶ್ವಾಸದ ಸಂದೇಶ ನೀಡುವ ಕರ್ತವ್ಯ ಪ್ರಮುಖವಾಗಿ ಯುವ ನಾಗರಿಕರು ಮಾಡಬೇಕಾದ ಅಗತ್ಯತೆ ಇದೆ.ನಮ್ಮ ಶಿವಮೊಗ್ಗವನ್ನು ರಾಜಕೀಯ ಲಾಭಕ್ಕಾಗಿ ಇಲ್ಲಿನ ಯುವಕರಿಗೆ ದ್ವೇಷದ ವಿಶ ನೀಡಿ ಅಶಾಂತಿ ಸೃಷ್ಟಿಸುತ್ತಿರುವವರು ಇದ್ದಾರೆ, ಪೊಲೀಸರು ಇವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಹಿಂದೂ ಮುಸ್ಲಿಂ ಎನ್ನುವುದಕ್ಕಿಂತ ನಾವೆಲ್ಲ ಭಾರತೀಯರು ನಾವು ಸರ್ವಜನಾಂಗದ ಶಾಂತಿಯ ತೋಟದ ಮರಗಳು ಎಂದು ಜವಾಬ್ದಾರಿಯುತ ನಾಗರೀಕರು ಅರ್ಥ ಮಾಡಿಕೊಳ್ಳಬೇಕು. ಈದ್ ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳು ಅದ್ದೂರಿಯಾಗಿ ವಿಜ್ರಂಭಣೆಯಿಂದ ಆಚರಿಸಿ ಸೌಹಾರ್ದತೆಯ ಸಂದೇಶ ನೀಡುವ ಮೂಲಕ ರಾಜ್ಯಕ್ಕೆ ಶಿವಮೊಗ್ಗ ಒಂದು ಮಾದರಿಯಾಗಿ ಮಾಡಬೇಕಾದ ಕರ್ತವ್ಯ ಸರ್ವ ನಾಗರಿಕರದ್ದು.
ಹಬ್ಬಗಳಲ್ಲಿ ಮಧ್ಯ ಪಾನ ಮಾಡಿಕೊಂಡು ವಾಹನ ಚಲಾಯಿಸುವುದು, ವೀಲೀಂಗ್ ಬೈಕ್ ಸ್ಟೆಂಟ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತದೆ ಇದರಿಂದ ದೂರವಿರಿ ಎಂದು ಮನವಿ ಮಾಡುತ್ತೇನೆ. ಶಿವಮೊಗ್ಗದ ಜನತೆಗೆ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು ಕೋರುತ್ತೇನೆ.