ಸುದ್ದಿಲೈವ್/ಶಿವಮೊಗ್ಗ
ಭದ್ರಾವತಿಯ ಮಸ್ಜಿದ್-ಎ-ಚೌಕ್‌ನ ಚುನಾವಣೆ ನಾಮಪತ್ರ ಹಂಚಿಕೆ, ಸಲ್ಲಿಕೆ ಹಾಗೂ ಪರಿಶೀಲನ ಕಾರ್ಯಗಳು ಇಂದಿಗೆ ಮುಗಿದಿದೆ. ನಾಮಪತ್ರ ಸಲ್ಲಿಕೆಯ ಪರಿಶೀಲನ ಪ್ರಕ್ರಿಯೆ ಮುಗಿದಿದ್ದು ಇದರಲ್ಲಿ 6 ಜನರ ಅರ್ಜಿ ತಿರಸ್ಕೃತಗೊಂಡಿದೆ ಎಂದು ಶಿವಮೊಗ್ಗದ ವಕ್ಫ್ ಬೋರ್ಡ್ ಅಧಿಕಾರಿ ಸೈಯ್ಯದ್ ಮೆಹ್ತಾಬ್ ಸಾಬ್ ತಿಳಿಸಿದ್ದಾರೆ.
ಅಕ್ಟೋಬರ್ 13 ರಂದು ಚುನಾವಣೆ ನಡೆಯಲಿರುವ ಭದ್ರಾವತಿಯ ಮಸ್ಜಿದ್ ಎ ಚೌಕ್‌ಗೆ ನಾಖೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದೆ. ಒಟ್ಟು ಇದುವರೆಗೂ 22 ಜನ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 6 ಜನರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದ 16 ಅರ್ಜಿ ಸ್ವೀಕೃತ ಗೊಂಡಿದೆ.
ವಕ್ಫ್ ಕಾಯ್ದೆ 2014ರ ಉಲ್ಲಂಘನೆಯ ಅಡಿ 6 ಜನರ ಅರ್ಜಿ ತಿರಸ್ಕೃತವಾಗಿದೆ. ಇದರಲ್ಲಿ ಘಟಾನುಘಟಿಗಳ ಅರ್ಜಿಯೇ ತಿರಸ್ಕೃತವಾಗಿರುವುದರಿಂದ ಅಖಾಡಕ್ಕೆ ಹೊಸ ತಿರುವು ಪಡೆದುಕೊಂಡಿದೆ. ವಕ್ಫ್ ಕಾಯ್ದೆ 2014 ರ ಗುತ್ತಿಗೆ ನಿಯಮದ ಪ್ರಕಾರ, ಸಂಸ್ಥೆಯ ಆಸ್ತಿಯಲ್ಲಿ ಬಾಡಿಗೆದಾರರಾಗಿರ ಬಾರದು. ಸಂಸ್ಥೆಯ ಕುಟುಂಬಸ್ಥರು ಕಮಿಟಿಯಲ್ಲಿ ಸದಸ್ಯರಾಗಿರ ಬಾರದು ಎಂಬ ನಿಯಮಗಳು ಉಲ್ಲೇಖವಾಗಿದ್ದರಿಂದ 6 ಜನರ ಅರ್ಜಿ ತಿರಸ್ಕೃತಗೊಂಡಿದೆ.
ಹಳೆ ಮಾಜಿ ಅಧ್ಯಕ್ಷರ ಅರ್ಜಿಗಳೆ ತಿರಸ್ಕೃತವಾಗಿರುವುದರಿಂದ ಈ ಬಾರಿ ಮಸ್ಜಿದ್ ಎ ಚೌಕ್ ಸಮಿತಿಗೆ ನೂತನ ನಿರ್ದೇಶಕರು ಆಯ್ಕೆಯಾಗಲಿದ್ದಾರೆ. 11 ಜನರ ನಿರ್ದೇಶಕರು ಅ.13 ರಂದು ಆಯ್ಕೆಯಾಗಲಿದ್ದಾರೆ.