Girl in a jacket

ಮೈಸೂರು ದಸರಾಕ್ಕೆ ಹೆಚ್ಚುವರಿ‌ನಿಲ್ದಾಣಗಳಲ್ಲಿ ನಿಲುಗಡೆ



ಸುದ್ದಿಲೈವ್/ಶಿವಮೊಗ್ಗ

ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ 16225/16226 ಮತ್ತು 16221/22 ಕ್ರಮ ಸಂಖ್ಯೆಯ ರೈಲಿಗೆ ದಸರಾ ಪ್ರಯುಕ್ತ ಹೆಚ್ಚುವರಿ ನಿಲುಗಡೆಗೆ ಮೈಸೂರು ರೈಲು ವಿಭಾಗ ನಿರ್ಧರಿಸಿದೆ. 

ಮೈಸೂರು-ಶಿವಮೊಗ್ಗ ನಡುವಿನ 16225/26 ಕ್ರಮ ಸಂಖ್ಯೆಯ ಕ ರೈಲು ಮತ್ತು ಮೈಸೂರು-ತಾಳಗುಪ್ಪ ನಡುವೆ ಸಂಚರಿಸು 16221/22 ರ ಕುವೆಂಪು ಎಕ್ಸ್ ಪ್ರೆಸ್ ರೈಲಿಗೆ ಮಾತ್ರ ಹೆಚ್ಚುವರಿ ನಿಲುಗಡೆ ನೀಡಲಾಗುತ್ತಿದೆ.

ಕೃಷ್ಣ ರಾಜಸಾಗರ ಮತ್ತು ಬೆಳಗೋಳ ನಡುವೆ ಬರುವ ಸಾಗರಕಟ್ಟೆ, ದೋರನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ, ಹೊಸ ಅಗ್ರಹಾರ ಮತ್ತು ಮಾವಿನಕಟ್ಟೆಯಲ್ಲಿ ಹೆಚ್ಚುವರಿ ನಿಲುಗಡೆ ನೀಡಲಾಗಿದೆ. ಕುವೆಂಪು ಎಕ್ಸ್ ಪ್ರೆಸ್ ರೈಲು ದಿನ ಬೆಳಿಗ್ಗೆ ತಾಳಗುಪ್ಪವನ್ನ ಬೆಳಿಗ್ಗೆ 6-15 ಕ್ಕೆ ಬಿಡಲಿದ್ದು ಶಿವಮೊಗ್ಗ ಟೌನ್‌ ಸ್ಟೇಷನ್ ನ್ನ 8-20ಕ್ಕೆ ಬಿಡಲಿದೆ. ಮಧ್ಯಾಹ್ನ 2-03 ರಿಂದ 2-43 ರ ನಡುವೆ ಈ ನಿಲ್ದಾಣವನ್ನ ಸೇರಲಿದೆ. 

ಮಧ್ಯಾಹ್ನ 2 ಗಂಟೆಗೆ ಮೈಸೂರು ನಿಲ್ದಾಣ ಬಿಡುವ ಕುವೆಂಪು ಎಕ್ಸ್ ಪ್ರೆಸ್ ರೈಲು, 2-17 ರಿಂದ 2-56 ರ ನಡುವೆ ಸೇರುವ ಈ ನಿಲ್ದಾಣಗಳಲ್ಲಿ ನಿಲುಗಡೆ ಬರಲಿದೆ. ಇನ್ನು ಮೈಸೂರು-ಶಿವಮೊಗ್ಗ ನಡುವಿನ 16225/26 ಕ್ರಮ ಸಂಖ್ಯೆಯ ರೈಲು ಮೈಸೂರು ನಿಲ್ದಾಣವನ್ನ ಪ್ರತಿದಿನ ಬೆಳಿಗ್ಗೆ 10-15 ಕ್ಕೆ ಬಿಡಲಿದ್ದು ಬೆಳಿಗ್ಗೆ 10-25 ಕ್ಕೆ ಬೆಲಗೋಳ ನಿಲ್ದಾಣ ತಲುಪಲಿದ್ದು

ಕೃಷ್ಣರಾಜಸಾಗರ, ಕಲ್ಲೂರು ಯಡೆಹಳ್ಳಿ, ಸಾಗರಕಟ್ಟೆ ದೋರ್ನಹಳ್ಳಿ ಹಳ್ಳಿಗೆ 10-43 ರ ವೇಳೆ ತಲುಪಲಿದೆ. ಶಿವಮೊಗ್ಗವನ್ನ ಪ್ರತಿದಿ‌ನ ಈ ರೈಲು 11-15 ಕ್ಕೆ ಬಿಡಲಿದ್ದು ಮಧ್ಯಾಹ್ನ 3-56 ಕ್ಕೆ ದೋರ್ನಹಳ್ಳಿ ತಲುಪಲಿದ್ದು 4-30 ಕ್ಕೆ ಬೆಲಗೋಳ ತಲುಪಿ 4-50 ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಈ ತಾತ್ಕಾಲಿಕ ನಿಲುಗಡೆ ಅ.9 ರಿಂದ 13 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು