ಸುದ್ದಿಲೈವ್/ಆಗುಂಬೆ
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಸಿ. ಮಂಜುನಾಥ್ ಬಿನ್ ಎ.ಬಿ. ಚಿನ್ನಪ್ಪಗೌಡ ಎಂಬುವವರ ತಾಯಿ ಕಮಲಮ್ಮ ಎಂಬ 76 ವರ್ಷ ಮಹಿಳೆ ಸೆ.03 ರಂದು ಮನೆಬಿಟ್ಟು ಹೋಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಇವರು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ. ತಲೆಯಲ್ಲಿ 5 ಇಂಚು ಉದ್ದದ ಬಿಳಿ ಕೂದಲಿರುತ್ತದೆ. ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೌಕಳಿ ನೈಟಿ ಧರಿಸಿರುತ್ತಾರೆ.
ಈ ಮಹಿಳೆಯ ಬಗ್ಗೆ ಸುಳಿವು ಕಂಡಲ್ಲಿ ಶಿವಮೊಗ್ಗ ಎಸ್.ಪಿ ಕಚೇರಿ 08182-261400, ಡಿವೈಎಸ್‌ಪಿ ತೀರ್ಥಹಳ್ಳಿ-08181-220388, ಸಿಪಿಐ ಮಾಳೂರು-9480803333, ಪಿಎಸ್‌ಐ ಆಗುವಂಬೆ-9480803314 ಇವರುಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.