Girl in a jacket

ಅಕ್ಟೋಬರ್ 3 ರಂದು ಟೋಲ್ ಮುಂದೆ ಭಾರೀ ಪ್ರತಿಭಟನೆಗೆ ಹೋರಾಟ ಸಮಿತಿ ತೀರ್ಮಾನ



ಸುದ್ದಿಲೈವ್/ಶಿಕಾರಿಪುರ

ಹತ್ತಿರದ ಕುಟ್ರಳ್ಳಿ ಬಳಿ ರಾಜ್ಯ ಹೆದ್ದಾರಿ 57 ರಲ್ಲಿ ನಿರ್ಮಾಣಗೊಂಡ ರಸ್ತೆ ಸುಂಕ ವಸೂಲಿ ಕೇಂದ್ರದ ವಿರುದ್ಧ ಸ್ಥಳೀಯರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.  ಅವೈಜ್ಞಾನಿಕ ವಾಗಿ ಸುಂಕ ವಸೂಲಿ ಕೇಂದ್ರವನ್ನು ನಿರ್ಮಿಸಿಕೊಂಡು ಸರಕಾರ ಬಡವರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಶಿಕಾರಿಪುರ ತಾಲ್ಲೂಕು ಅಧ್ಯಕ್ಷ  ನ್ಯಾಯವಾದಿ ಶಿವರಾಜ್ ಸುಣ್ಣದಕೊಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ಟೋಲ್ ಗೇಟ್ ಗಳಿಂದಾಗಿ ದಿನ ನಿತ್ಯ ಆಸ್ಪತ್ರೆ, ಕಛೇರಿ ಮತ್ತು ಇತರೆ ಕೆಲಸ ಕಾರ್ಯಗಳಿಗೆ ಓಡಾಡಲು ಸ್ಥಳೀಯರಿಗೆ ಆರ್ಥಿಕ ತೊಂದರೆ ಉಂಟಾಗುತ್ತಿದ್ದು ನಿಯಮ ಮೀರಿ ಅಳವಡಿಸಲಾಗಿರುವ ಈ ಟೂಲ್ ನ್ನು ಕಿತ್ತೊಗೆಯುವ ತನಕ ನಾವು ಸುಮ್ಮನಿರುವುದಿಲ್ಲ.  

ಈ ಮಧ್ಯ ಸ್ಥಳೀಯ ರಾಜಕಾರಣಿಗಳು ಈಗ ತೆಗೆಸುತ್ತೇವೆ, ಆಗ ತೆಗೆಸುತ್ತೇವೆ,  ಸ್ಥಳೀಯರಿಗೆ ಸುಂಕ ವಸೂಲಿ ಯಿಂದ ವಿನಾಯಿತಿ ಕೊಡಿಸುತ್ತೇವೆ ಎಂದು  ಜನರನ್ನು ಮತ್ತು ಹೋರಾಟವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು   ಹೋರಾಟ ಅನಿವಾರ್ಯವಾಗಿದೆ.

ಬರುವ ತಿಂಗಳ 3 ನೇ ತಾರೀಕುದಂದು ಟೂಲ್ ಮುಂದೆ ಭಾರೀ ಪ್ರತಿಭಟನೆ ನಡೆಸಲು ಸಮಿತಿ ತೀರ್ಮಾನ ಕೈಗೊಂಡಿದೆ ಎಂದರು.


 ಸಮಿತಿಯ ಸಂಚಾಲಕ ನ್ಯಾಯವಾದಿ ವಿನಯ್ ಪಾಟೀಲ್ ಗೇರುಕೊಪ್ಪ ಮಾತನಾಡಿ ಶಾಂತಿ ರೀತಿಯಲ್ಲಿ ಈ ಹಿಂದೆ ನಾವುಗಳು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೆವು ಆದರೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ ಹಾಗಾಗಿ ತೀವ್ರವಾಗಿ ಹೋರಾಟ ಮಾಡಲು ಸಮಿತಿಯಲ್ಲಿ ತೀರ್ಮಾನ ಕೈ ಗೊಳ್ಳಲಾಗಿದೆ ಸೊರಬ, ಆನವಟ್ಟಿ, ಶಿರಾಳಕೊಪ್ಪ, ಶಿಕಾರಿಪುರ ಭಾಗದ ಸಾರ್ವಜನಿಕರು, ಆಟೋ, ಲಾರಿ, ಬಸ್ ಹಾಗೂ ಖಾಸಗಿ ವಾಹನಗಳ ಮಾಲಕರು ದಿನಾಂಕ 3/10/2024ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆ ಯಲ್ಲಿ ಪಾಲ್ಗೊಂಡು ಈ ಅನ್ಯಾಯದ ವಿರುದ್ದ ಧ್ವನಿಗೋಡಿಸಬೇಕೆಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಜಯಪ್ಪ ಗೌಡ್ರು, ಪ್ರಧಾನ ಕಾರ್ಯದರ್ಶಿ ನವೀದ್ ಶಿರಾಳಕೊಪ್ಪ,  ಮುಖಂಡರಾದ ಗಂಗಾಧರ ಶೆಟ್ರು, ಪರಮೇಶ್ವರಪ್ಪ ಮ ಳ್ಳೂರು, ಕುಬೇರಪ್ಪ, ಮುತ್ತು ಗೌಡ್ರು, ಸಿದ್ದಲಿಂಗಯ್ಯ ಸ್ವಾಮಿ ಬೆಳ್ಳಿಗಾವಿ, ನಾಗರಾಜ (ಪುಟ್ಟು) ಬೆಳ್ಳಿಗಾವಿ, ಇನ್ನಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು