ಸುದ್ದಿಲೈವ್/ಶಿವಮೊಗ್ಗ
ಇಂದು ಶಿವಮೊಗ್ಗದ ಬಂಜಾರ ಸಂಘದ ಸಮುದಾಯ ಭವನದಲ್ಲಿ ಒಳಮೀಸಲಾತಿ ಬಗ್ಗೆ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ನಡೆದಿದೆ. 24 ಜಿಲ್ಲೆಗಳಿಂದ ಬಂಜಾರ ಸಮುದಾಯ ಸಂಕೀರ್ಣದಲ್ಲಿ ಭಾಗಿಯಾಗಿದ್ದಾರೆ. ಎಂಎಲ್ ಸಿ ಪ್ರಕಾಶ್ ರಾಥೋಡ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿ ಬೇಡ ಎಂದರೂ ಸರ್ವೊಚ್ಚ ನ್ಯಾಯಾಲಯ ಒಳ ಮೀಸಲಾತಿ ಕುರಿತು ಆದೇಶ ಮಾಡಿದೆ. ಬಂಜಾರ ಮಾತ್ರವಲ್ಲ, ಭೋವಿ, ಕೊರಚ ಮತ್ತು ಕೊರಮ ಸಮುದಾಯ ಈ ಒಳ ಮೀಸಲಾತಿಯಲ್ಲಿ ವಂಚಿತರಾಗಿದ್ದಾರೆ. ಹಾಗಾಗಿ ಇಂದು ಸಾಕಷ್ಟು ಚರ್ಚೆ ಆಗಿವೆ. ನಾಲ್ಕು ತಂಡ ರಚಿಸಲು ಯೋಚಿಸಲಾಗಿದೆ ಎಂದರು.
ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಅಂಗಳದಲ್ಲಿದ್ದು ಅದು ಏನು ಮಾಡಲಿದೆ ಎಂಬುದು ಸಹ ಕುತೂಹಲವಿದೆ. ಸರ್ಕಾರದ ಮೇಲೆ ಒತ್ತಡ ಹೇರಬೇಕಾ? ಕಾನೂನು ಬದ್ದವಾಗಿ ಹೋರಾಡಲು ಸರ್ವೋಚ್ಚ ನ್ಯಾಯಾಲಯಕ್ಕೆ ಮರು ಅರ್ಜಿ ಹಾಕಬಹುದಾ? ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದರು.
ಪಕ್ಷಾತೀತವಾಗಿ ಚರ್ಚೆ ಆಗಿದೆ. ಮುಖ್ಯವಾಹಿನಿಗೆ ಬರುವ ತಳ ಸಮಯಕ್ಕೆ ಒಳಮೀಸಲಾತಿ ಬಹಳ ಹೊಡೆತ ನೀಡಿದೆ. ಸರ್ಕಾರಿ ಸವಲತ್ತು ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಆದರೆ ಈ ಒಳ ಮೀಸಲಾತಿ ಗೊಂದಲ ಮೂಡಿಸಿದೆ. ಒಳಮೀಸಲಾತಿ ಜಾರಿಗೊಳಿಸಲು ಅವರ ಬಳಿ ಡಾಟಾ ಇದೆಯಾ? ಸದಾಶಿವ ಆಯೋಗ ಜಾರಿಗೆ ತರಲು 20 ವರ್ಷ ಕಳೆದಿದೆ. ಇದು ಜಾರಿಯಾಗಲಿದೆಯಾ? ಈ ಬಗ್ಗೆ ಒಗ್ಗಟ್ಟಾಗಿ ಹೋರಾಟಬೇಕಿದೆ.
ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಜನಗಣತಿ ನಡೆಯಬೇಕಿದೆ. ಆಗಿನ ಜನಸಙಖ್ಯೆಗೂ ಈಗಿನ ಜನಸಂಖ್ಯೆಗೂ 20% ಹೆಚ್ಚು ಆಗಿದೆ. ಹಾಗಾಗಿ ಸದಾಶಿವಾ ಆಯೋಗ ಜಾರಿಯಾಗಲು ಮತ್ತೆ ಜನಗಣತಿಯಾಗಬೇಕು. ಮೇ್ಮನವಿ ಹೋಗಬೇಕಾ, ಸಿಎಂ
ಶಿವಮೊಗ್ಗ ಬಂಜಾರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ, ಜಿಪಂ ಮಾಜಿ ಸದಸ್ಯ, ಅನಿತಾ ಕುಮಾರಿ, ರಾಘವೇಂದ್ರ ನಾಯ್ಕ, ಮಾಜಿ ಕಾರ್ಪರೇಟರ್ ಆರ್ ಸಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ