ಮಂಗಳವಾರ, ಸೆಪ್ಟೆಂಬರ್ 3, 2024

ತೊಟ್ಟಿಗೆ ಬಿದ್ದ ಗೋವಿನ ರಕ್ಷಣೆ

 


ಸುದ್ದಿಲೈವ್/ಭದ್ರಾವತಿ


ಮನೆ ಮುಂದಿನ ತೊಟ್ಟಿಗೆ ಬಿದ್ದಿದ್ದ ಸಿಂಧಿ ಆಕಳನ್ನ ಭದ್ರಾವತಿ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ್ದಾರೆ.


ಭದ್ರಾವತಿಯ ಹೊಳೆಗಂಗೂರಿನಲ್ಲಿ ಜಯನಾಯ್ಕ ಎಂಬುವರ ಮನೆಯ ಮುಂದೆ ನಿರ್ಮಿಸಲಾಗಿದ್ದ 6 ಅಡಿ ತೊಟ್ಟಿಗೆ ಸಿಂಧಿ ಹಸುವೊಂದು ಬಿದ್ದಿದೆ.


ಜಯನಾಯ್ಕ್ ಅವರೇ ಸಾಕಿದ ನಾಲ್ಕು ವರ್ಷದ ಸಿಂಧಿ ಹಸು ಕೊಟ್ಟಿಗೆಗೆ ಸಂಜೆ 6 ಗಂಟೆಯ ವೇಳೆಗೆ  ಹೋಗುವ ವೇಳೆಯಲ್ಲಿ ತೊಟ್ಟಿಯಲ್ಲಿ ಬಿದ್ದಿದೆ. ತೊಟ್ಟಿ ಇನ್ನೂ ಅಪೂರ್ಣವಾದುದ್ದರಿಂದ ತೊಟ್ಟಿಯ ಮೇಲೆ ಅಡಿಕೆ ದಬ್ಬೆ ಹಾಕಲಾಗಿತ್ತು.


ಆದರೆ ಅದನ್ನ ತುಳಿದ ಹಸು ತೊಟ್ಟಿಗೆ ಬಿದ್ದಿದೆ.   ಪ್ರತಿದಿನ ಬೇರೆ ದಾರಿಯಲ್ಲಿ ಕೊಟ್ಟಿಗೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ದಿನ ಹಸು ಏಕಾಏಕಿ ಮನೆಯ ಮುಂದಿನ ದಾರಿಯಿಂದ ಹೋಗಲು ಯತ್ನಿಸಿ ತೊಟ್ಟಿಗೆ ಬಿದ್ದಿದೆ. ತೊಟ್ಟಿಗೆ ಬಿದ್ದ ಹಸುವನ್ನ ಭದ್ರಾವತಿ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.


ರಕ್ಷಣಾಕಾರ್ಯದಲ್ಲಿ ಅಗ್ನಿಶಾಮಕದಳದ ಅಧಿಕಾರಿ ಹುಲಿಯಪ್ಪ ಹಾಗೂ ಸಿಬ್ಬಂದಿ ವರ್ಗದವರಾದ.  ಅಶೋಕ್ ಕುಮಾರ್  .ಶೇಖರ್ . ಸುರೇಶ್ . ರಾಜ ನಾಯಕ್ ಭಾಗಿಯಾಗಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ