ಸುದ್ದಿಲೈವ್/ಶಿರಾಳಕೊಪ್ಪ
ಸಾವಿರಾರು ಮಂದಿ ಅಮರನಾಥ ದರ್ಶನಕ್ಕೆ ಕಾರಣಕರ್ತರಾದ ಶ್ರೀ ಯುತ ಬಿ ಎಂ ವಿಶ್ವನಾಥಯ್ಯ ರವರು ಇಂದು ಲಿಂಗಕ್ಯರಾದರು.
ಪಟ್ಟಣದ ಹಿರಿಯ ಮುತ್ಸದ್ದಿ, ಧಾರ್ಮಿಕ ಚಿಂತಕರಾಗಿರತಕ್ಕಂತಹ ಶ್ರೀಯುತರು ಹಲವಾರು ವರುಷಗಳಿಂದ ದೊರದ ಗೋಕಾಕ್ ಪಟ್ಟಣದಲ್ಲಿ ನೆಲೆಯೋರಿ ಸಾವಿರಾರು ಜನರನ್ನು ಅಮರ್ ನಾಥ್ ದರ್ಶನಕ್ಕೆ ಕಾರಣ ಕರ್ತರಾಗಿದ್ದು ಸತತವಾಗಿ ಕಳೆದ 38 ವರ್ಷಗಳಿಂದ ಭಕ್ತರನ್ನು ಅಮರ್ ನಾಥ್ ದರ್ಶನಕ್ಕೆ ಕರೆದೋಯ್ಯುವುವ ಮೂಲಕ ಸಾವಿರಾರು ಅಭಿಮಾನಿ ಗಳನ್ನು ಗಳೆಸಿದ್ದಾರೆ.
1949 ನೇ ಇಸವಿಯಲ್ಲಿ ಶಿರಾಳಕೊಪ್ಪ ಕೆಳಗಿನಕೇರಿಯಲ್ಲಿ ಪ್ರಭಯ್ಯ ಬಸವನ ಕಟ್ಟಿ ಮಠ ಮತ್ತು ಈರಮ್ಮ ದಂಪತಿಗಳಿಗೆ ಪ್ರಥಮ ಪುತ್ರ ನಾಗಿ ಜನಿಸಿದ ಇವರು ಕರ್ನಾಟಕ ಸಾರಿಗೆ ಸಂಸ್ಥೆ ಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡು ನಿಗಮದಿಂದ ಬಂಗಾರದ ಪದಕ ಪಡೆದು ಅನೇಕ ಸಮಾಜ ಮುಖಿ ಮತ್ತು ಧಾರ್ಮಿಕ ಕಾರ್ಯ ಗಳಲ್ಲಿ ತೊಡಗಿಸಿ ಕೊಂಡಿದ್ದು. ಶ್ರೀಯುತರ ಆಗಲಿಕೆಯನ್ನು ಅವರ ಅಪಾರ ಭಂದು ಮಿತ್ರರು ಇಂದು ದುಃಖ ತಪ್ತಾರಾಗಿದ್ದಾರೆ.
ಶ್ರೀಯುತರ ಅಂತಕ್ರಿಯೆ ಇಂದು ಸಂಜೆ ಗೋಕಾಕ್ ಪಟ್ಟಣದ ವೀರಶೈವ ರುದ್ರಭೂಮಿ ಯಲ್ಲಿ ನೆರವೇರಿಲಿದೆ.