Girl in a jacket

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ಅಸ್ತು


ಸುದ್ದಿಲೈವ್

ಸಿಎಂ ವಿರುದ್ಧ ಮೂಡಾ ಹಗರಣ ತನಿಖೆಗೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅಸ್ತು ಎಂದಿದೆ. ಒಂದು ತಿಂಗಳ ಸುಧೀರ್ಘ ವಾದ ಪ್ರತಿವಾದ ಕೇಳಿಸಿಕೊಂಡ ನ್ಯಾಯಾಧೀಶ ನಾಗಪ್ರಸನ್ನ ರಾಜ್ಯಪಾಲರ ಪ್ರಾಸಿಕ್ಯೂಷನ್‌ನ್ನ ಎತ್ತಿ ಹಿಡಿದಿದ್ದಾರೆ.

ಇತ್ತ ಕಾನೂನು ತಜ್ಞರ ಸಲಹೆ ಪಡೆದು ಸಿಎಂ ಸಿದ್ದರಾಮಯ್ಯ ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಹೈಕೋರ್ಟ್ ತೀರ್ಪು ಬೆನ್ನಲ್ಲೇ ಸಿದ್ದರಾಮಯ್ಯ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಮೂಡ ತನಿಖೆ ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಸಂಕಷ್ಟ ಎದುರಾಗಿದೆ. 

ಹೈಕೋರ್ಡ್ ನಲ್ಲಿ ಸಿಎಂ ಅರ್ಜಿವಜಾಗೊಂಡಿದೆ. ಈ ಬಗ್ಗೆ ಸುಪ್ರೀಂನಲ್ಲಿ ಪ್ರಶ್ನಿಸಲು ಅವಕಾಶವಿರುವುದರಿಂದ ಸುಪ್ರೀಂನಲ್ಲಿ ಪ್ರಶ್ನಿಸಲಾಗುತ್ತದೆ. ಸಿಎಂ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಆಗ್ರಹಿಸಿದ್ದಾರೆ. 

ನಾಳೆ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡುವ ಸಾಧ್ತತೆಯಿದೆ. ಅವರ ವಿರುದ್ಧ ಎಫ್ಐಆರ್ ಹಾಕಲು ಸಹ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು