ಸುದ್ದಿಲೈವ್/ಶಿವಮೊಗ್ಗ
ಸಂಸದರ ವಿರುದ್ಧ ಭ್ರಷ್ಠಾಚಾರದ ಆರೋಪ ಮಾಡಿರುವ ಆಯನೂರು ಮಂಜುನಾಥ್ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ನಾನು ಯಾವುದೇ ದೇವರ ಸಮ್ಮುಖಕ್ಕೆ ಬಂದು ಯಾವ ಭ್ರಷ್ಠಾಚಾರ ನಡೆಸಿಲ್ಲ ಎಂದು ಹೇಳಲು ಸಿದ್ದ ಎಂದು ಸವಾಲು ಹಾಕಿದ್ದಾರೆ.
ಇಂದು ಸುದ್ದಿಗೋಷ್ಟಿ ನಡೆಸಿದ, ಸಂಸದ ಬಿ.ವೈ.ರಾಘವೇಂದ್ರ ಆಯನೂರು ಮಂಜುನಾಥ್ ಆಸ್ಪತ್ರೆ, ಹೋಟೆಲ್ ಹಾಗೂ ಟೋಲ್ ಬಗ್ಗೆ ಮಾತನಾಡಿದ್ದಾರೆ. ನಾನು ಅವರು ಎಲ್ಲಿ ಕರೆದರೂ ಅಲ್ಲಿ ದೇವರ ಬಳಿ ಬಂದು ಮಾತನಾಡಲು ರೆಡಿ ಇದ್ದೀನಿ ಎಂದು ಆಯನೂರಿಗೆ ತಿಳಿಸಿದ್ದಾರೆ.
ಹರಕೆರೆ ಆಸ್ಪತ್ರೆಯ ಬಗ್ಗೆ ಆರೋಪ ಮಾಡಿದ್ದಾರೆ. ರೈತನಿಗೂ ಕೆಐಡಿಬಿಗೂ ಸಂಪರ್ಕ ಮಾಡಿಸಲಾಗಿದೆ. ಕೆಐಡಿಬಿ ಲ್ಯಾಂಡ್ ಅಲ್ಲ ಅದು. ಕನ್ಸಲ್ಟ್ ಅವಾರ್ಡ್ ಆಗಿ ಸಿಂಗಲ್ ವಿಂಡೋದಲ್ಲಿ ದೊರೆತಿದೆ. ಆದರೆ ಮಿನಿ ಮೂಡ ಎಂದು ಅವರು ಬಿಂಬಿಸಿದ್ದಾರೆ.
ಟೋಲ್ ಬಗ್ಗೆ ಆಯನೂರು ಮಂಜುನಾಥ್ ಅರೊಪಿಸಿದ್ದಾರೆ. ನಾವೇ ಟೋಲ್ ಬೇಡ ಎಂದಿದ್ವಿ. ಸರ್ಕಾರ ಬದಲಾದಂತೆ ಟೋಲ್ ನಿರ್ಮಾಣವಾಗಿದೆ.
ಡಿಸಿಗೂ ಹೇಳಲಾಗಿದೆ. ಆದರೆ ಟೋಲ್ ಸ್ಥಾಪನೆಯಲ್ಲಿ ನಮ್ಮ ಕೂವಾಡವಿದೆ ಎಂದು ಆರೋಪಿಸಲಾಗುತ್ತಿದೆ. ನಾವು ಎಲ್ಲಿಗೆ ಬಂದು ದೇವರ ಬಳಿ ಬಂದು ಮಾತನಾಡಲು ಸಿದ್ದ ಎಂದಿರುವುದು ಕುತೂಹಲ ಮೂಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ