ಸುದ್ದಿಲೈವ್/ಶಿವಮೊಗ್ಗ
ಲಾಫಿಂಗ್ ಬುದ್ದ ಸಿನಿಮಾ ಪ್ರಮೋಷನ್ ಕುರಿತು ನಟ ಪ್ರಮೋದ್ ಶೆಟ್ಟಿ ಶಿವಮೊಗ್ಗಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಪ್ರೊಡ್ಯೂಸರ್ ಉಸಿರಾಡುವಂತೆ ಆಗಸ್ಟ್ ತಿಂಗಳು ಮಾಡಿದೆ.ಕೃಷ್ಣಂ ಪ್ರಣಯಸಖಿ, ಭೀಮಾ ಹಾಗೂ ಲಾಫಿಂಗ್ ಬುದ್ದ ಉತ್ತಮ ಪ್ರತಿಕ್ರಿಯೆಯನ್ನ ನೀಡಿದೆ. ರಿಷಬ್ ಶೆಟ್ಟಿ ಪ್ರೊಡಕ್ಷನ್ ನಲ್ಲಿ ಮೂಡಿಬಂದ 6 ನೇ ಸಿನಿಮಾ ಇದಾಗಿದೆ. ನಗುವಿಗಾಗಿ ಮಾಡಿದ ಸಿನಿಮಾ ಲಾಫಿಂಗ್ ಬುದ್ದ ಆಗಿದೆ ಎಂದರು.
ಶಶಿಕುಮಾರ್ ಕಾಲದಲ್ಲಿ ಪೊಲೀಸರ ಸಿನಿಮಾ ಬಂದಿತ್ತು, ಪೊಲೀಸರ ಹೆಂಡ್ತಿ, ಇಬ್ಬರ ಹೆಂಡತಿ ಮುದ್ದಿನ ಪೋಲೀಸ್ ರಿಲೀಸ್ ಆಗಿತ್ತು. ಇದಾದ ನಂತರ ಪೊಲೀಸರ ಬಗ್ಗೆ ಯಾವ ಸಿನಿಮಾ ಮೂಡಿಬಂದಿಲ್ಲ. ಲಾಫಿಂಗ್ ಬುದ್ಧ ಜೋನರ್ ಸಿನಿಮಾವಾಗಿದೆ. ಗೋವರ್ಧನ ಕ್ಯಾರೆಕ್ಟರ್ ನ್ನ ತಾನು ಮಾಡುವುದಾಗಿ ತಿಳಿಸಿದ ಪ್ರಮೋದ್ ಶೆಟ್ಟಿ, ಮನೆ ಮತ್ತು ಕಚೇರಿಯನ್ನ ಲವಲವಿಕೆಯಿಂದ ವಾತಾವರಣವನ್ನ ಪಿಸಿ ಗೋವರ್ಧನ್ ಇಟ್ಟುಕೊಂಡಿರುತ್ತಾರೆ. ಲಾಫಿಂಗ್ ಬುದ್ಧದಲ್ಲಿ ಪೊಲೀಸರು ಒಳ್ಳವರಿದ್ದಾರೆ. ಅವರು ಮನುಷ್ಯರುಎಂದು ಹೇಳುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕುಟುಂಬ ಕುಳಿತು ನೋಡುವ ಸಿನಿಮಾವಾಗಿದೆ. ಆರಂಭದಲ್ಲಿ 100 ಚಲನಚಿತ್ರದಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈಗ 150 ಚಲನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಕಲೆಕ್ಷನ್ ಬಗ್ಗೆ ರಿಷಬ್ ಗೆ ಕೇಳಬೇಕು. ಆದರೆ ನಿರ್ಮಾಪಕರಿಗೆ ಉತ್ತಮ ಸಂಪಾದನೆ ಮಾಡಿಕೊಟ್ಟಿದೆ ಎಂಬ ನಂಬಿಕೆ ಇದೆ ಎಂದರು.
ನಿರ್ದೇಶಕ ಭರತ್ ರಾಜ್ ಮಾತನಾಡಿ, ಸಿನಿಮಾಕ್ಕೆ ಉತ್ತಮ ಪ್ರತಿಕ್ತಿಯೆ ದೊರೆತಿದೆ. ಹೆಚ್ಚು ಜನಕ್ಕೆ ತಲುಪಬೇಕೆಂಬ ಉದ್ದೇಶದಿಂದ ರಾಜ್ಯದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಎರಡು ಕಾಲುಗಂಟೆ ಸಿನಿಮಾ ಇದಾಗಿದೆ. ಲಾಫಿಂಗ್ ಬುದ್ದ ಸಿನಿಮಾ ಗೋವರ್ಧನ್ ಎಂಬ ಪೊಲೀಸ್ ಕಾನ್ ಸ್ಟೇಬಲ್ ನ ಕಥೆ ಇದು.ತಿಳಿಹಾಸ್ಯದ ಮೂಲಕ ಪೊಲೀಸ್ ವ್ಯವಸ್ಥೆಯಲ್ಲಿ ಹೇಳುವ ಚಿತ್ರ ಇದಾಗಿದೆ ಎಂದರು.
ಲಾಫಿಂಗ್ ಬುದ್ಧನಲ್ಲಿ ನಗುನಗುತ್ತಿದ್ದ ಸನ್ಯಾಸಿಯಾಗಿದ್ದಾನೆ. ಅದೇ ಕಾನ್ಸೆಪ್ಟ್ ನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಇರುತ್ತಾನೆ. ಹೀರೋ ಮೊದಲನೆಯ ಚಿತ್ರ ಇದು ಎರಡನೇ ಚಿತ್ರವಾಗಿದೆ. ಪ್ರಮೋದ್ ಶೆಟ್ಟರನ್ನ ಆಯ್ಕೆ ಮಾಡಿರುವ ಬಗ್ಗೆ ಕುತೂಹಲವಿದೆ. ರಂಗಭೂಮಿಯಿಂದ ಬಂದ ಕಾರಣ ಸ್ನೇಹಬಳಸಿಕೊಳ್ಳುವುದು ಕರಗತವಾಗಿದೆ.
ಜಲಂಧರ್, ಶಭಾಸ್ ಬಡ್ಡಿಮಗನೆ, ಸಾಗರದಲ್ಲಿ ಶೂಟ್ ಮಾಡಿರುವ ಅಧಿಕಪ್ರಸಂಗ, ಸಂಪೋರ್ಟಿಂಗ್ ಕ್ಯಾರೆಕ್ಟರ್ ನಲ್ಲಿ ಬಗೀರ, ಚೀತಾ, ಶೇಷಾ, ತಮಿಳಿನಲ್ಲೂ ಅಭಿನಯಿಸಿರುವೆ. ಅಣ್ಣಯ್ಯ ಎಂಬ ಸೀರಿಯಲ್ ನ್ನೂ ಪಾತ್ರವಹಿಸಿರುವೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದರು.
ಲಾಫಿಂಗ್ ಬುದ್ದನನ್ನ ಭದ್ರಾವತಿ, ಸಾಗರದಲ್ಲಿ ಶೂಟಿಂಗ್ ನಡೆದಿದೆ. ಸ್ಥಳೀಯ ಕಲಾವಿದರನ್ನೂ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ನಿರ್ಮಾಪಕ ಭರತ್ ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ