Girl in a jacket

ಜೈಲಿನಲ್ಲಿ ಬೀಡಿಗಾಗಿ ಅಧಿಕಾರಿಗಳ ಮೇಲೆ ಕಲ್ಲುತೂರಾಟ

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಜೈಲ್ ನಲ್ಲಿ ಬೀಡಿಗಾಗಿ ಸೆ.2 ರಂದು ಸಜಾ ಮತ್ತು ವಿಚಾರಣೆ ಕೈದಿಗಳಿಂದ ಪ್ರತಿಭಟನೆ ನಡೆದಿತ್ತು. ಯಾವಾಗ ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್‌ ಪ್ರಕರಣದಿಂದ ರಾಜ್ಯದ ಎಲ್ಲಾ ಜೈಲಿನಲ್ಲಿ ಬಿಗಿ ಮಾಡಲಾಗಿತ್ತೋ ಆಗಿನಿಂದ ಶಿವಮೊಗ್ಗ ಜೈಲ್‌ನಲ್ಲಿ ಬೀಡಿಗೂ ಅವಕಾಶ ಇಲ್ಲದಂತೆ ಟೈಟ್ ಮಾಡಲಾಗಿತ್ತು.


ಸೆ.2 ರಂದು  ಬೀಡಿಗಾಗಿ ಖೈದಿಗಳು ಪ್ರತಿಭಟನೆ ನಡೆಸಿದ್ದರು. ಇದಾದ 10 ದಿನಕ್ಕೆ   ಬೀಡಿಗಾಗಿ ಖೈದಿಗಳು ಉಗ್ರರೂಪದಲ್ಲಿ ಗಲಾಟೆ ಮಾಡಿದ್ದಾರೆ. ಕಾವೇರಿ ವಿಭಾಗದ ಕೊಠಡಿಗಳ ಮೇಲೆ ಅಧಿಕಾರಿ/ಸಿಬ್ಬಂದಿಗಳ ಮೇಲೆ ಕಲ್ಲು, ತೊರಾಟ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 21 ಜನ ವಿರುದ್ಧ ಜಣಯಲ್ ಸೂಪರಿಂಟೆಂಡೆಂಟ್ ಡಾ.ಅನಿತಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಜೈಲಿನಲ್ಲಿ ಸೆ.7 ರಿಂದ ಸೆ.12 ರವರೆಗೆ ಬೀಡಿ ಸೇದಲು ಬಿಡಲ್ಲ ಎಂದು ಸಜಾ ಮತ್ತು ವಿಚಾರಣಾ ಬಂಧಿಗಳು ದೊಂಬಿ ಗಲಾಟೆ ನಡೆಸಿದ್ದಾರೆ. ಸೆ. 12 ರಂದು  ಸರಿಯಾದ ಸಮಯಕ್ಕೆ ಬೀಗ ಮುದ್ರೆ ಮಾಡಲು ಬಿಡದೆ ಕರ್ತವ್ಯನಿರತ ಸಿಬ್ಬಂದಿಗಳ ಮೇಲೆ ಖೈದಿಗಳು ಅವಾಚ್ಯ ಶಬ್ದಗಳಿಂದ ನಿರಂತರವಾಗಿ ನಿಂದನೆ ಮಾಡಿದ್ದಾರೆ.


ಸೆ.12 ರಂದು ಬೀಗ ಮುದ್ರೆ ತೆರೆದಾಗಿನಿಂದ ಕಾರಾಗೃಹದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ ಸುಮಾರು 12:00 ಗಂಟೆಗೆ ಕಾವೇರಿ ವಿಭಾಗದ ವಿಶೇಷ ಭದ್ರತೆಯಲ್ಲಿರುವ  ಶರಣ ಪೂಜಾರಿ ಎಂಬಾತನು ಇತೆರೆ ಬಂದಿಗಳಾದ ವಿಜೇತ್, ಲಿಖಿತ್, ಕಿರಣ್ ಪೂಜಾರಿ, ನಿಶಾಂತ, ಸುಶಾಂತ್, ಮಣಿ ಮತ್ತು ಇತರರೊಂದಿಗೆ ಸೇರಿಕೊಂಡು ಕಾವೇರಿ ವಿಭಾಗದಿಂದ ಶರಾವತಿ ವಿಭಾಗಕ್ಕೆ ನುಗ್ಗಿ ಅಲ್ಲಿದ್ದ ಖೈದಿಗಳ ಜೊತೆ ಗಲಾಟೆ ಮಾಡಿದ್ದಾನೆ.


ಶರಾವತಿ ವಿಭಾಗದಲ್ಲಿದ್ದ ಖೈದಿ ರಾಜಶೇಖರ್ ರೆಡ್ಡಿ ಎಂಬಾತನು ಇತರೆ ಬಂಧಿಗಳನ್ನ ಸೇರಿಸಿಕೊಂಡು ಕಾವೇರಿ ವಿಭಾಗಕ್ಕೆ ನುಗ್ಗಲು ಯತ್ನಿಸಿದಾಗ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ತಡೆದಿದ್ದಾರೆ. ಈ ವೇಳೆ ಶರಾವತಿ ವಾರ್ಡ್‌ನಲ್ಲಿದ್ದ ರಾಜಶೇಖರ್ ರೆಡ್ಡಿ ಅವಾಚ್ಯ ಶಬ್ದಗಳಿಂದ ಬೈದು, ದೊಂಬಿ, ಗಲಾಟೆ ಮಾಡಿ ಕಾರಾಗೃಹ ಕರ್ತವ್ಯನಿರತ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಸಿಬ್ಬಂದಿಗಳ ಲಾಟಿ ಕಸಿದುಕೊಂಡು ಕಾರಾಗೃಹದ ಸುಗಮ ಆಡಳಿತಕ್ಕೆ ಹಾಗೂ ಭದ್ರತೆಗೆ ಧಕ್ಕೆ ಉಂಟುಮಾಡಿದ್ದಲ್ಲದೆ ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದಾನೆ.


ಇದರಿಂದ ಜೈಲಿನಲ್ಲಿ ದೊಂಬಿ ಗಲಾಟೆ ನಡೆಸಿದ 21 ಜನರ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೈಲಿನ ಎಫ್ಐಅರ್ ಗೆ ಸಂಬಂಧಿಸಿದೆ ಈ ವರ್ಷ ಇದು 8 ನೇ ಎಫ್ಐಆರ್ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು