Girl in a jacket

ನಾಳೆ ಗಣಪನಿಗಾಗಿ ಸಿದ್ದಗೊಂಡಿದೆ ಬೃಹತ್ ಗಾತ್ರದ ನೋಟಿನ ಹಾರ

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ. ಹಿಂದೂ ಮಹಾಸಭಾ ಗಣಪತಿಯ ಕೇಸರಿ ಅಲಂಕಾರ ಸಮಿತಿ ಊರನ್ನೇ ಶೃಂಗರಿಸಿದೆ.  ಹಾಗೆ ಗಣೇಶನ ಭಕ್ತರು ನಾಳೆ ಹೂವಿನ ಹಾರ ಹಾಕಲು ತಯಾರಿ ನಡೆಸಿದ್ದಾರೆ.


ನಾಳೆ ಹೂವಿನ ಹಾರದ ಜೊತೆ ಬೃಹತ್ ಗಾತ್ರದ ನೋಟಿನ ಹಾರ ಹಾಕಲು ಎರಡು ತಂಡಗಳು ಸಜ್ಜಾಗಿವೆ. ಸುಮಾರು 15 ರಿಂದ 20 ಪಾಯಿಂಟ್‌ಗಳಲ್ಲಿ ಹಿಂದೂ ಮಹಾಸಭಾ ಗಣಪತಿಗೆ ಹೂವಿನ ಮಾಲೆ ಹಾಕಲಾಗುತ್ತದೆ. ಈ ಪಾಯಿಂಟ್ ನಲ್ಲೇ ನೂರಾರು ಹೂವಿನ ಮಾಲೆಗಳು ಗಣಪತಿಗೆ ಅರ್ಪಿಸಲಾಗುತ್ತಿದೆ.


ಬೃಹತ್ ಗಾತ್ರದ ನೋಟಿನ ಹಾರದೊಂದಿಗೆ ಹೆಚ್ ಸಿ ಯೋಗೀಶ್


ಅದರಂತೆ ಬೃಹತ್ ಗಾತ್ರದ ನೋಟಿನ ಹಾರ ಹಾಕಲು ಎರಡು ತಂಡ ಸಜ್ಜುಗೊಂಡಿದೆ. ನಾಳೆ  ಬೆಳಿಗ್ಗೆ ಕಾಂಗ್ರೆಸ್‌ನ ಮುಖಂಡ ಹೆಚ್ ಸಿ ಯೋಗೀಶ್ ಒಂದು ಕಡೆ ಸಜ್ಜಾಗಿದ್ದರೆ, ಮತ್ತೊಂದೆಡೆ ಮಾರ್ಕೆಟ್ ಬಾಯ್ಸ್ ಸಜ್ಜುಗೊಂಡಿದೆ. ಹೆಚ್.ಸಿ.ಯೋಗೀಶ್  ಮನೆಯಿಂದಲೇ 10 ಅಡಿ ನೋಟಿನ ಹಾರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ನೋಟಿನ ಹಾರ ಅರ್ಪಿಸಲಿದ್ದಾರೆ.


ಪ್ರತಿವರ್ಷ ಹೆಚ್ ಸಿ ಯೋಗೀಶ್ ಹಿಂದೂ ಮಹಾಸಭಾ ಗಣಪತಿಗೆ ಕೊಬ್ಬರಿ ಹಾರ ಹಾಕುತ್ತಿದ್ದರು. ಈ ವರ್ಷ ಹಾರ ಬದಲಾಗಿದೆ. 10 ಅಡಿಯ ನೋಟಿನ ಹಾರ ತಂದು ಯೋಗೀಶ್ ಗಣಪನ ಪ್ರೀತಿಪಾತ್ರಕ್ಕೊಳಗಾಗುತ್ತಿದ್ದಾರೆ. 


ಮಾರ್ಕೆಟ್ ಭಾನುವಿನಿಂದ ನೋಟಿನ ಹಾರ ಹಾರ


ಹಾಗೆ ಬಟ್ಟೆ ಮಾರ್ಕೆಟ್‌ನಲ್ಲಿರುವ  ಮಾರ್ಕೆಟ್ ಭಾನು ಅವರು 5, 10, 20, 50 ರೂ.ಗಳ ಒಟ್ಟು 75 ಸಾವಿರ ರೂ.ಗಳ 9 ಅಡಿ ಹಾರವನ್ನ ತಯಾರಿಸಿದ್ದಾರೆ. ನಾಳೆ ಗಾಂಧಿ ಬಜಾರ್ ನ ಸಿನಿಮಾ‌ ರಸ್ತೆಯಲ್ಲಿ ಹಾರ ಹಾಕಿ ಗಣಪತಿಯ ಪ್ರೀತಿ ಪಾತ್ರರಾಗಲಿದ್ದಾರೆ.



ಮಾರ್ಕೆಟ್ ಬಾಯ್ಸ್ ಸಂಘಟನೆಯ ಅಡಿಯಲ್ಲಿ ತಮಿಳುನಾಡಿನಿಂದ ಭಾನು ಅವರು ಈ ಹೂವಿನ ಹಾರ ತಯಾರಿಸಿಕೊಂಡು ಬಂದಿದ್ದಾರೆ. ಪ್ರತಿವರ್ಷ ಕಾಯಿನ್ ಗಳಿಂದ ತಯಾರಿಸಿದ್ದ ಹೂವಿನ ಹಾರವನ್ನ ಇವರು ಅರ್ಪಿಸಲಿದ್ದಾರೆ.


ಈ ಬಾರಿ ಇವರು ಸಹ ಹಾರ ಬದಲಾವಣೆ ಮಾಡಿದ್ದಾರೆ. ಈ ಬಾರಿ ಭಾರಿ ಗಾತ್ರದ ನೋಟಿನ ಹಾರವನ್ನ ಇಬ್ಬರು ನಾಯಕರಿಂದ ಹಾಕಲಾಗುತ್ತಿದೆ. ಹೀಗೆ ಒಬ್ಬೊಬ್ಬರು ನಾಳೆ ಶಿವಮೊಗ್ಗದ ಐತಿಹಾಸಿಕ ಗಣಪತಿ ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು