ಸುದ್ದಿಲೈವ್/ಸಾಗರ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಾಸೂರು ಗ್ರಾಮದ ಸರ್ಕಾರಿ ಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಆರಂಭದಲ್ಲಿ ಏಸುವಿನ ಪ್ರಾರ್ಥನೆ ಹಾಡಿಸಿದ ಹಿನ್ನಲೆಯಲ್ಲಿ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್‌ನ್ನ ಅಮಾನತ್ತು ಪಡಿಸುವಂತೆ ಹಿಂದೂ ಸಂಘಟನೆ ಪ್ರತಿಭಟಿಸಿದೆ.
ಮಾಸೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಸೆ.13 ರಂದು ಮಾಸೂರು ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಏಸುವಿನ ಪ್ರಾರ್ಥಿಸಿರುವುದು ಆಕ್ಷೇಪಣೆಗೆ ಕಾರಣವಾಗಿದೆ.
ಶಾಲೆಯ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ವಿರುದ್ದ ಆರೋಪ ಕೇಳಿ ಬಂದಿದೆ. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಏಸುವಿನ ಗೀತೆ ಹಾಡಿಸಲಾಗಿದೆ. ಏಸುವಿನ ಗೀತೆ ಹಾಡಿಸಿದ್ದಕ್ಕೆ ವಿಶ್ವ ಹಿಂದು ಪರಿಷತ್, ಬಜರಂಗದಳ ಆಕ್ಷೇಪಿಸಿದೆ.
ಶಾಲೆಯಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್ ವಿದ್ಯಾರ್ಥಿ ಇಲ್ಲ. ಈಗಿರುವಾಗ ಏಸುವಿನ ಗೀತೆ ಏಕೆ ಹಾಡಿಸಿದರು ಎಂದು ಹಿಂದೂ ಸಂಘಟನೆ ಪ್ರಶ್ನಿಸಿದೆ. ಹಿಂದುಗಳ ಭಾವನೆಗೆ ಶಿಕ್ಷಕ ಧಕ್ಕೆ ಉಂಟು ಮಾಡಿದ್ದಾನೆ. ಈ ಕೂಡಲೇ ಶಿಕ್ಷಕನನ್ನು ಅಮಾನತು ಮಾಡುವಂತೆ ಆಗ್ರಹಿಸಿದೆ.
ಸಾಗರದ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿ ಹೆಚ್ ಪಿ ಹಾಗು ಬಜರಂಗದಳ ಕಾರ್ಯಕರ್ತರು ಶಿಕ್ಷಕನ ಅಮಾನತ್ತಿಗೆ ಆಗ್ರಹಿಸಿ ಬಿಇಒ ಅವರಿಗೆ ಮನವಿ ಸಲ್ಲಿಸಿದೆ.