ಸುದ್ದಿಲೈವ್/ದಾವಣಗೆರೆ
ಮರಳಿನ ವಿಚಾರಕ್ಕೆ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿದೆ. ಇಬ್ಬರಿಗೆ ಚಾಕು ಇರಿತ ಉಂಟಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಹಾಗೂ ಕಡಕಟ್ಟೆ ಗ್ರಾಮಗಳಲ್ಲಿ ನಡೆದಿದೆ.
ಶಿವರಾಜ್ (33) ಎಂಬ ವ್ಯಕ್ತಿ ಸಾವು ಕಂಡಿದ್ದು, ಇನ್ನೊಬ್ಬ ಭರತ್ ಗೆ ತೀವ್ರಗಾಯ ಉಂಟಾಗಿದೆ. ಗಾಯಾಳನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಮರಿಗೊಂಡನಹಳ್ಳಿ ಹಾಗೂ ಕಡದಕಟ್ಟೆ ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿದೆ. ಎರಡು ಗ್ರಾಮಗಳ ವ್ಯಾಪ್ತಿಯಲ್ಲಿನ ತುಂಗಭದ್ರ ನದಿಪಾತ್ರದ ಮರಳಿಗಾಗಿ ಘರ್ಷಣೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸರ ಭೇಟಿ ನೀಡಿದ್ದಾರೆ.