ಸುದ್ದಿಲೈವ್/ಶಿವಮೊಗ್ಗ
ಪ್ರೀತಿ ಎಂಬುದು ಬದುಕಾಗಬೇಕೆ ವಿನಃ ಅಸ್ತ್ರ ಆಗಬಾರದು, ಮಿಡ್ಲ್ ಕ್ಲಾಸ್ ಜನರಿಗೆ ಆರಂಭದಲ್ಲಿ ಪ್ರೀತಿಯಾಗಿದ್ದರೂ ಮದುವೆಯೊಂದಿಗೆ ಆ ಪ್ರೀತಿ ಕೊನೆಗೊಳ್ಳುತ್ತದೆ. ಪ್ರೀತಿಸಿ ಮದುವೆಯಾದವರೆಲ್ಲಾ ಸುಖದ ಸುಪತ್ತಿಗೆಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳುತ್ತಿಲ್ಲ. ಮಿಡ್ಲಕ್ಲಾಸ್ ಜನರ ಪ್ರೀತಿ ಬಹುತೇಕ ಹೀಗೆ ನಡೆಯುತ್ತೆ.
ಆದರೆ ಇಲ್ಲೊಂದು ಎಫ್ಐಆರ್ ಮಾತ್ರ ಒಬ್ಬ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ ಆತನನ್ನ ಮದುವೆಯಾಗದೆ, ಬೇರೆಯವರನ್ನ ಮದುವೆಯಾದರೂ ಸುಖವಾಗಿ ಇರದೆ ನಂತರ ವಾಪಾಸ್ ತಾಯಿ ಮನೆಗೆ ಬಂದು ನಂತರ ನಾಪತ್ತೆಯಾದ ಪ್ರಕರಣ ಹೆತ್ತವರನ್ನ ಚಿಂತಾಕ್ರಾಂತರನ್ನಾಗಿ ಮಾಡಿದೆ.
ಮದುವೆಗೆ ಬಂದ ಯುವತಿಯನ್ನ ಆಕೆಯ ಕುಟುಂಬ ಮದುವೆಗೆ ಹುಡುಗನನ್ನ ಹುಡುಕಿದೆ. ಆದರೆ ಗೋಪಾಳದ ನಿವಾಸಿಯೊಬ್ಬ ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ 13 ವರ್ಷದಿಂದ ಆಡಾಡಿಸಿ ಕೈಕಟ್ಟಿದ್ದಾನೆ.
ಯುವತಿಯನ್ನ ಹುಡುಕಿಕೊಂಡು ಬಂದ ಹುಡುಗರಿಗೆ ಯುವತಿಯ ಬಗ್ಗೆ ಇಲ್ಲ ಸಲ್ಲದ ಕಥೆಕಟ್ಟಿ ಮದುವೆ ತಪ್ಪಿಸಿದ್ದಾನೆ. ಇದರಿಂದ ಬೇಸತ್ತ ಯುವತಿಯ ಮನೆಯವರು ಬೇರೆ ಊರಿನ ಹುಡುಗನನ್ನ ಹುಡುಕಿ ಮದುವೆ ಮಾಡಿದ್ದಾರೆ. ಆ ಹುಡುಗನಿಗೂ ಸಂಪರ್ಕಿಸಿದ ಗೋಪಾಳದ ನಿವಾಸಿ ಮದುವೆಯಾಗಿ 1½ ತಿಂಗಳಿಗೆ ಬೇರೆಯಾಗುವಂತೆ ಮಾಡಿದ್ದಾನೆ.
ಮನೆಗೆ ಬಂದ ನಂತರವೂ ಗೋಪಾಳದ ನಿವಾಸಿ ಮದುವೆಯ ಆಸೆ ಹುಟ್ಟಿಸಿದ್ದಾನೆ.ಎಲ್ಲದಕ್ಕೂ ಬೇಸತ್ತು ಯುವತಿ ಮನೆ ಬಿಟ್ಟು ಹೋಗಿದ್ದಾಳೆ. ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.