Girl in a jacket

ಆನ್‌ನಲ್ಲಿ ಗೂಗಲ್ ರಿವ್ಯೂವ್ ಕೆಲಸ ಎಂದು ನಂಬಿಸಿ ಲಕ್ಷಾಂತರ ರೂ. ವಂಚನೆ

 


ಸುದ್ದಿಲೈವ್/ಶಿವಮೊಗ್ಗ

ಆನ್ ಲೈನ್‌ನಲ್ಲಿ ಗೂಗಲ್ ರಿವಿವ್ಯೂ ಮೇಲೆ ಹೂಡಿಕೆಮಾಡಿದರೆ ಲಾಭಗಳಿಸಬಹುದು ಎಂದು ಪ್ರೇರೇಪಿಸಿ ಲಕ್ಷಾನುಗಟ್ಟಲೆ ಲಾಭಗಳಿಸಬಹುದು ಎಂದು ನಂಬಿಸಿ ವಂಚಿಸಿದ ಘಟನೆ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಾಟ್ಸಪ್ ಸಂದೇಶ ರವಾನಿಸಿ ಇದುಗೂಗಲ್ ರಿವ್ಯೂವ್ ಕೆಲಸ, ಹೋಟೆಲ್‌ಗೆ 5 ಸ್ಟಾರ್ ರೇಟಿಂಗ್ ನೀಡಿ 30/- ನಿಂದ 50/- ರೂ. ಕಮಿಷನ್ ಕೊಡುವುದಾಗಿ ನಂಬಿಸಿದ್ದಾರೆ. 30/- ರೂ.ನಿಂದ 50/- ರೂ. ಕೊಡಿಸುವುದಾಗಿ ಮೊದಲಿಗೆ 300 ರೂ.ಲಾಭ ಬಂದಿದೆ.‌

ನಂತರ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದರೆ  20% ನಿಂದ 30% ಲಾಭ ಬರಲಿದೆ ಎಂದು ನಂಬಿಸಲಾಗಿದೆ. ಲಾಭಾಂಸ ಪಡಯುವ ಆಸೆಗೆ ಬಿದ್ದ ಶಿಕ್ಷಕ ವೃತ್ತಿಮಾಡಿಕೊಂಡವರು 3,23,927/ ರೂ ಹಣ ಕಳೆದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು